ಪುತ್ತೂರು: ಕಾಂಕ್ರೀಟ್ ಪೀಠೋಪಕರಣಗಳ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಸುತ್ತಲ ರಾಜ್ಯಗಳಲ್ಲಿ ಮನೆ ಮಾತಾಗಿರುವ ಮಾಸ್ಟರ್ ಪ್ಲಾನರಿ ಸಂಸ್ಥೆಯು ವಿಶ್ವ ಮಾನ್ಯವಾಗುವತ್ತ ದಾಪುಗಾಲಿಡುತ್ತಿದೆ. ಪುತ್ತೂರಿನ ನೆಹರೂ ನಗರದ ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮಾಸ್ಟರ್ ಪ್ಲಾನರಿಯು ಕರ್ನಾಟಕದಾದ್ಯಂತ ಹಲವು ಕಡೆ ಉತ್ಪಾದನಾ ಶಾಖೆಗಳನ್ನು ಹೊಂದಿದೆ. ಇಂದು ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಉದ್ಯೋಗಿಗಳಿಗೆ ಅನ್ನ ನೀಡುತ್ತಿದೆ.
ಮಾಸ್ಟರ್ ಪ್ಲಾನರಿಯು 32 ವರ್ಷಗಳ ಹಿಂದೆ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿಗೆ ಡೆಸ್ಕ್, ಬೆಂಚುಗಳನ್ನು ಸರಬರಾಜು ಮಾಡಿತ್ತು. ಮೂರು ದಶಕಗಳ ಹಿಂದೆ ನೀಡಿದ್ದ ಆ ಪೀಠೋಪಕರಣಗಳು ಇಂದಿಗೂ ರಿಪೇರಿಗಳ ಅವಶ್ಯಕತೆ ಇಲ್ಲದೆ ಅತ್ಯಂತ ಸದೃಢವಾಗಿವೆ.
ಕೊಂಬೆಟ್ಟು ಶಾಲೆಯ ವಿದ್ಯಾರ್ಥಿಗಳು ಇಂದಿಗೂ ಆ ಪೀಠೋಪಕರಣಗಳನ್ನು ಬಳಸುತ್ತಿದ್ದು ಆ ಬಗ್ಗೆ ಅಲ್ಲಿನ ಮುಖ್ಯಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಅವರು ಮಾಸ್ಟರ್ ಪ್ಲಾನರಿಗೆ ಲಿಖಿತ ಪ್ರಶಂಸಾ ಪತ್ರವನ್ನು ಕಳಿಸಿದ್ದು ಅದು ನ್ಯೂಸ್ ಪುತ್ತೂರಿಗೆ ಲಭ್ಯವಾಗಿದೆ. ಪತ್ರದ ಪೂರ್ಣ ಪಾಠ ಇಲ್ಲಿದೆ.
ನ್ಯೂಸ್ ಪುತ್ತೂರು ಮಾಸ್ಟರ್ ಪ್ಲಾನರಿಯನ್ನು ಅಭಿನಂದಿಸುತ್ತದೆ.