ಪುತ್ತೂರ: ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ದಿನದಂದು ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಕ್ತರ ಮನಸೆಳೆಯಿತು
ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿ ಮನಸೆಳೆದರು
ಜನಪ್ರಿಯ ಶಿವ ಗೀತೆಗಳು ಸುಮಧುರ ಗೀತೆಗಳನ್ನು ಹಾಡಿ ತನ್ನ ಹೆಜ್ಜೆ ಗುರುತಿನಿಂದ ಎಲ್ಲರ ಮೆಚ್ಚುಗೆ ಗಳಿಸಿದರು. ಶಿವನೆಂದರೆ ದೈವಗಳಿಗೆ ಮಹಾದೇವ ಸತ್ಯ ಸತ್ವಗಳ ಅನುಭವ ಇಂತಹ ಶಿವನ ಕುರಿತು ಹತ್ತಕ್ಕೂ ಹೆಚ್ಚು ಕವಿತೆಗಳ ಮಧುರ ಕಾವ್ಯ ಗುಚ್ಚವಿದು ಸುಮಧುರ ಹಿನ್ನೆಲೆ ಪಕ್ಕ ವಾದ್ಯಗಳೊಂದಿಗೆ ಹೆಣೆದ ಸುಂದರ ಗುಚ್ಚವಿದು. ಶಿವರಾತ್ರಿ ಸಂಭ್ರಮ ಶಿವಾನಂದ ವರ್ಣ ರಂಜಿತ ಗೀತಾಂಜಲಿ ಮೊದಲಿಗೆ ದರು ವರ್ಣದ ರೇವತಿರಾಗದ ಆದಿತಾಳದ ಓಂ ಶಂಭೋ ಮಹಾದೇವ ಹಾಡನ್ನು ಹಾಡಿದರು.
ರಾಗ ಕನಕಾಂಗಿ ಚತುರಶ್ರ ರೂಪಕ ತಾಳದಲ್ಲಿ ಶ್ರೀಶ ಪುತ್ರಾಯ ಹಾಡನ್ನು ಸುಂದರವಾಗಿ ಪ್ರಸ್ತಾವಳಿಸಿದರು. ತದನಂತರ ವೆಂಕಟ ಕವಿ ರಚನೆ ಕಲ್ಯಾಣ ರಾಮ ಆದಿ ತಾಳ ಹಾಡಿ ರಂಜಿಸಿದರು ರಾಗ ರೇವಾಗುಪ್ತಿ ಮಿಶ್ರ ಚಾಪು ತಾಳದ ಗೋಪಾಲಕ ಪಾಹಿಮಾನ್, ಶಿವರಂಜನ್ ಭಜನ್ ಶಿವಸ್ತುತಿ ಶಿವಾಯ ಸಂಗೀತದ ನಾದ ಸುತ್ತಾಟ ರಾಗ ಚೌಳಿ ಆದಿತಾಳ ಬ್ರಹ್ಮಮೋಕ್ಕಟೆ ಸರ್ವರನ್ನು ಬಾ.. ಎಂದು ಕರೆದಂತಿತ್ತು. ರಾಗ ಬೃಂದಾವನ ರಾಗದ ಸಾರಂಗ ಡಾ. ಬಾಲಮುರಳಿ ಕೃಷ್ಣ ರಚನೆ ತಿಲ್ಲಾನ ಹಾಡಿನೊಂದಿಗೆ ಸಮಾಪ್ತಿಯಾಯಿತು.