ಪುತ್ತೂರು: ಶಿವರಾತ್ರಿ ಎಂದರೆ ಇಡೀ ರಾತ್ರಿ ಶಿವನಾಮ ಸ್ಮರಣೆಯೊಂದಿಗೆ ಶಿವನ ಬಗ್ಗೆ ಚಿಂತಿಸುತ್ತಾ ಕತ್ತಲೊಳಗೆ ಬೆಳಕನ್ನು ಕಾಣುವ ದಿನ. ಅಜ್ಞಾನದ ಹಾದಿಯಿಂದ ಬೆಳಕಿನ ವಿಜಯವನ್ನು ಸಾಧಿಸುವ ಹಬ್ಬ ಇದಾಗಿದೆ. ಈ ಹಬ್ಬದ ಆಚರಣೆಯಿಂದ ಮನುಷ್ಯನ ಮಾನಸಿಕ ಪರಿವರ್ತನೆ ಜೊತೆಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ವೀಣಾ ಸರಸ್ವತಿ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಶಿವರಾತ್ರಿ ಆಚರಣೆಯ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗವಾನ್ ಶಿವ ಶಾಶ್ವತ ಪ್ರಾಣವನ್ನು ಸಂಕೇತಿಸುತ್ತಾನೆ. ಶಾಶ್ವತ ಅಸ್ತಿತ್ವದ ಅಸ್ಥಿರ ಶಕ್ತಿ. ಅವನನ್ನು ಮೃತ್ಯುಂಜಯ ಎಂದು ಗೌರವಿಸಲಾಗುತ್ತದೆ. ಸಾವನ್ನು ಗೆದ್ದವನು. ಅವನು ತನ್ನ ಭಕ್ತರಿಗೆ ಜ್ಞಾನದ ಮಾರ್ಗವನ್ನು ತೋರಿಸುತ್ತಾನೆ. ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಉಪನ್ಯಾಸಕಿ ಮಧುರಾ ಸ್ವಾಗತಿಸಿ, ವಂದಿಸಿದರು.