ಐದು ಮನೆ ನಿವೇಶನಗಳು ದುರುಪಯೋಗ | ಸೂಕ್ತ ತನಿಖೆಗೆ ಇಸಾಕ್ ಸಾಲ್ಮರ ಆಗ್ರಹ

ಪುತ್ತೂರು: ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಯವರು ಬಡ ಜನರಿಗೆ ನೀಡಲಾಗುವ 5 ಮನೆ ನಿವೇಶನಗಳ ದುರುಪಯೋಗ ಹಾಗೂ ಕಂದಾಯ ಇಲಾಖೆಯ ಹಾಗೂ ನಗರ ಸಭಾ ಕಾಯ್ದೆಯನ್ನು ಉಲ್ಲಂಘಿಸಿರುತ್ತಾರೆ ಇವರ ಮೇಲೆ ಸದರಿ ಪ್ರಕರಣವನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದು, ಈ ಕುರಿತು ತನಿಖೆ ಮಾಡಲು ಅಧಿಕಾರಿಗಳಿಗೆ ಸೂಚನೆಯು ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಇಸಾಕ್ ಸಾಲ್ಮರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೆಮ್ಮಿಂಜೆ ಗ್ರಾಮದ ಸಿಂಹವನ ಎಂಬಲ್ಲಿಗೆ ಹೋಗುವ ರಸ್ತೆಯ ಬಳಿ 2001ನೇ ವರ್ಷದಲ್ಲಿ ಮಹಮ್ಮದ್ ಆಲಿಯವರು ತನ್ನ ಕುಟುಂಬದ ಹೆಸರಿನಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ 5 ಮನೆ ನಿವೇಶನಗಳ ಜಿ.ಪಿ.ಎ. ಪಡೆದು ಸದರಿ ಸ್ಥಳದ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಆಗಿನ ತಹಾಶೀಲ್ದಾರ ದಾಸೆಗೌಡ ಎಂಬುವವರು ತನಿಖೆ ನಡೆಸಿ ಈ ಮಂಜೂರಾತಿ ಸರ್ಕಾರದ ಕಾನೂನಿನಂತೆ ಉಲ್ಲಂಘನೆಯಾಗಿದೆ ಎಂದು ರದ್ದುಪಡಿಸಿ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಎಂಬುದಾಗಿ ನಮೂದಾಗಿರುತ್ತದೆ. ಆದರೆ ಮಹಮ್ಮದ್ ಆಲಿಯವರು ನಗರಸಭಾ ಸದಸ್ಯರಾದ ಸಮಯದಲ್ಲಿ ಸದರಿ ಸ್ಥಳದಲ್ಲಿ ದೊಡ್ಡ ಬಂಗಲೆಯನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಟ್ಟಿರುತ್ತಾರೆ. ಅವರ ಮೇಲೆ ಈ ಹಿಂದೆ ಹಲವು ಬಾರಿ ದೂರು ಕೊಟ್ಟರು ತಾಲೂಕು ಆಡಳಿತ ನಗರ ಸಭೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಅಲ್ಲದೇ ಯಾವುದಾದರು ಆಧಿಕಾರಿಗಳು ಶಾಸಕರು ಜನಪ್ರತಿನಿಧಿಗಳು ಮಾತನಾಡಿದರೆ ಅವರ ಮೇಲೆ ಸುಮ್ಮನೆ ಲೋಕಾಯುಕ್ತಕ್ಕೆ ದೂರು ನೀಡುವುದು ಮತ್ತು ಮಾಹಿತಿ ಹಕ್ಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ದೂರುಗಳನ್ನು ನೀಡಿ ಅಧಿಕಾರಿ ವಲಯದವರನ್ನು ಬೆದರಿಸಿ ಸಾರ್ವಜನಿಕವಾಗಿ ತುಂಬಾ ತೊಂದರೆಯುಂಟು ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುವ ಹುನ್ನಾರವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಪ್ರತಿವಾದಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸಿ ಸರಕಾರ ರದ್ದು ಪಡಿಸಿದ ಸ್ಥಳವನ್ನು ವಸತಿ ಇಲ್ಲದವರಿಗೆ ಹಂಚಿಕೆ ಮಾಡಲು ಆದೇಶಿಸುವಂತೆ ಮನವಿ ಮಾಡಿದ್ದೇವೆ. ಈ ಕುರಿತು ಈಗಾಗಲೇ ತನಿಖೆಯ ಕುರಿತು ಅಧಿಕಾರಿಗಳಿಗೆ ಆದೇಶ ಬಂದಿದೆ. ಸರಕಾರಿ ಅಧಿಕಾರಿಗಳು 15 ದಿವಸದೊಳಗೆ ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನಾನು ಲೋಕಾಯುಕ್ತರಿಗೆ ಮತ್ತು ಗವರ್ನರರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅದ್ದು ಪಡೀಲ್‍ ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top