ಪುತ್ತೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ನೇತೃತ್ವದಲ್ಲಿ ಪುತ್ತೂರು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದೊಂದಿಗೆ 4ನೇ ವರ್ಷದ ಅಂತರರಾಜ್ಯ ಮತ್ತು ಕಾಲೇಜು ವಿಭಾಗ ಹಾಗೂ ವಲಯ ಮಟ್ಟದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ ಮತ್ತು ಮನೋರಂಜನಾ ಕ್ರೀಡೆ ಮಾ.2 ಶನಿವಾರ ಬೆಳಿಗ್ಗೆ 10 ರಿಂದ ದೈಪಿಲ ಕ್ರೀಡಾಂಗಣದಲ್ಲಿ ನಡೆಯಲಿದೆ.
ಲೆವೆಲ್, ಸಿಂಗಲ್ ಗ್ರಿಪ್ ಹಾಗೂ ಪುಲ್ ಗ್ರಿಪ್ ಮಾದರಿಯಲ್ಲಿ 11 ವಿಧದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಅಂತರರಾಜ್ಯ ಮಟ್ಟದ ನಿರೂಪಕರಾದ ಸುರೇಶ್ ಪಡಿಪಂಡ ಹಾಗೂ ದೀಪಕ್ ನೆಲ್ಯಾಡಿಯವರ ಅತ್ಯದ್ಭುತ ನಿರೂಪಣೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಕ್ರೀಡೋತ್ಸವದ ಉದ್ಘಾಟನೆಯನ್ನು ಚಂದ್ರಕಲಾ ಜಯರಾಮ ಅರುವಗುತ್ತು ನೆರವೇರಿಸಲಿದ್ದು, ದೈಪಿಲ ಕ್ರೀಡಾ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ ಅಧ್ಯಕ್ಷತೆ ವಹಿಸುವರು. ವಚನಪ್ರದೀಪ್ ಅರುವಗುತ್ತು, ಕುಂಬ್ಲಾಡಿ ಕುಕ್ಕೆನಾಥ ಶ್ರೀ ಬಾಲಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಕೆ.ಪಿ. ರಾಮುಡೇಲು, ಕೃಷಿಕ ಕೃಷ್ಣಪ್ಪ ಕೆಳಗಿನಕೇರಿ ಗೌರವ ಉಪಸ್ಥಿತರಿರುವರು.
ರಾತ್ರಿ 9 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟಕ್ ಮಹಿಂದ್ರಾ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ಗೌಡ ಮೈಸೂರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಕಡಬ ಅರಕ್ಷಕ ಠಾಣೆ ಪೊಲೀಸ್ ಉಪನಿರೀಕ್ಷಕ ಅಭಿನಂದನ್ ಎಂ.ಎಸ್., ಅತಿಥಿಗಳಾಗಿ ಬೆಂಗಳೂರಿನ ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಚಾರ್ವಾಕ ಕುಮಾರಧಾರ ಫಾರ್ಮ್ಸ್ ನ ವಿಜಯಕುಮಾರ್ ಸೊರಕೆ, ಮುರ್ಡೇಶ್ವರ ಜಲವಿಜಯ ಬೋಟ್ ನ ಶಂಭುನಾರಾಯಣ ಖಾರ್ವಿ, ಚಾರ್ವಾಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು, ಬೆಂಗಳೂರು ಸೆವೆನ್ ಲೂಪ್ ಟೆಕ್ನಾಲಜೀಸ್ ಪ್ರೈ.ಲಿ. ಸಿಇಒ ಶರಣ್ ಉರುಬೈಲು, ಹೊಟೇಲ್ ಸುರಭಿ ಗ್ರೂಪ್ಸ್ ನ ಅಧ್ಯಕ್ಷ ನವೀತ್ ಶೆಟ್ಟಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ರವಿ ಕಟಪಾಡಿ ಉಡುಪಿ ಹಾಗೂ ಈಶ್ವರ್ ಮಲ್ಪೆ ಉಡುಪಿ ಅವರನ್ನು ಸನ್ಮಾನಿಸಲಾಗುವುದು.
ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಕೆ.ಪಿ.ರಾಮುಡೇಲು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ಅಧ್ಯಕ್ಷ ಹರೀಶ ಕೆಳಗಿನಕೇರಿ, ಅತಿಥಿಗಳಾಗಿ ಆನಂದ ಖಂಡಿಗ, ಧರ್ಣಪ್ಪ ಗೌಡ ಅಂಬುಲ ಭಾಗವಹಿಸಲಿದ್ದಾರೆ.
ರಾತ್ರಿ 7 ರಿಂದ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ನಡೆಯಲಿದೆ.