ಪುತ್ತೂರು: ಉನ್ನತ ಶಿಕ್ಷಣದ ಪಡೆಯುವ ನಿಟ್ಟಿನಲ್ಲಿ ಹೊರದೇಶಕ್ಕೆ ತೆರಳಿ, ಉದ್ಯಮಶೀಲರಾಗುವವರಿಗೆ ಮಾರ್ಗದರ್ಶನದ ಅವಶ್ಯಕತೆಯಿದ್ದು, ಇದನ್ನು ನೀಗಿಸುವ ಕೆಲಸವನ್ನು ವಿಝ್ಡಮ್ ಇನ್‍ಸ್ಟಿಟ್ಯೂಷನ್ಸ್ ನೆಟ್ ವರ್ಕ್ ಸಂಸ್ಥೆ ಮಾಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜತೆ ಉದ್ಯಮಶೀಲರಾಗಿ ಬೆಳೆಯುವಂತಾಗಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಬುಧವಾರ ದರ್ಬೆ ಬೈಪಾಸ್ ವೃತ್ತದ ಬಳಿಯಿರುವ ಆರಾಧ್ಯ ಆರ್ಕೇಡ್ ನಲ್ಲಿ ವಿಝ್ಡಮ್ ಇನ್ ಸ್ಟಿಟ್ಯೂಷನ್ಸ್ ನೆಟ್ ವರ್ಕ್‍ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಪ್ರಸ್ತುತ ದೇಶದ ಸಾಕ್ಷರತೆ 90 ಶೇ. ದಾಟಿದೆ. ದ.ಕ. ಜಿಲ್ಲೆ 90 ಶೇ ಸಾಕ್ಷರತೆ ಹೊಂದಿರುವ ಜಿಲ್ಲೆ. 1992 ರಲ್ಲಿ ದ.ಕ. ನೂರಕ್ಕೆ ನೂರು ಸಾಕ್ಷರತೆ ಆಗುವ ನಿಟ್ಟಿನಲ್ಲಿ ವಯಸ್ಕರ ಶಿಕ್ಷಣ ಆರಂಭಗೊಂಡಿತು. ವಿದ್ಯೆ ಕಲಿತವ ತನ್ನ ವ್ಯಕ್ತಿತ್ವವನ್ನು ಸಮಾಜದಲ್ಲಿ ಯಾವ ರೀತಿ ತೋರಿಸುತ್ತಾನೆ ಎಂಬುದಕ್ಕೆ ಸಾಕ್ಷರರಾದ ನಾವೆಲ್ಲ ಯೋಚನೆ ಮಾಡಬೇಕು ಎಂದ ಅವರು, ಪ್ರತಿಯೊಬ್ಬರಲ್ಲೂ ವೈಟ್‍ಕಾಲರ್ ಜಾಬ್ ಬೇಕು ಎಂಬ ಹಂಬಲವಿದೆ. ಆದರೆ ಎಲ್ಲರಿಗೂ ವೈಟ್‍ಕಾಲರ್ ಜಾಬ್ ನೀಡಲು ಅಸಾಧ್ಯ. ಇದಕ್ಕೆ ಕೌಶಲ್ಯ ಬೇಕಾಗಿದೆ. ಕೌಶಲ್ಯ ಸಿಕ್ಕಾಗ ಎಲ್ಲದರಲ್ಲೂ ಯಶಸ್ವು ಸಾಧ್ಯ. ಪ್ರಸ್ತುತ ಹತ್ತಾರು ಸಂಘ ಸಂಸ್ಥೆಗಳು ಕೌಶಲ್ಯ, ವಿದ್ಯೆ ಎತ್ತರಿಸುವ ಕೆಲಸ ಮಾಡುತ್ತಿದೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜತೆ ಉದ್ಯಮಶೀಲರಾಗಿ ಬೆಳೆಯಲು ವಿಝ್ಡಮ್ ಇನ್‍ಸ್ಟಿಟ್ಯೂಷನ್ಸ್ ನೆಟ್‍ವರ್ಕ್‍ಸಂಸ್ಥೆ ಸಹಕಾರಿಯಾಗಿದೆ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋ ರಿಬ್ಬನ್ ಕಟ್ ಮಾಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಪುತ್ತೂರು ಎಂಬ ಮುತ್ತಿನ ನಗರಿಯಲ್ಲಿ ವಿಶೇಷವಾಗಿ ಮಕ್ಕಳ ಕೌಶಲ್ಯ ಅಭಿವೃದ್ಧಿಗೆ ವೇದಿಕೆ ಒದಗಿಸಿಕೊಟ್ಟವರು ವಿಝ್ಡಮ್ ಸಂಸ್ಥೆ. ಇದೊಂದು ಅತ್ಯದ್ಭುತ ಸೇವೆ ಸಿಗುವ ಸಂಸ್ಥೆಯಾಗಿದ್ದು ಜತೆಗೆ ಶಿಕ್ಷಣ ವ್ಯಾಪ್ತಿಯನ್ನು ಕಂಡುಕೊಳ್ಳಲು ಸದಾವಕಾಶ ಎಂದ ಅವರು, ಸಂತ ಫಿಲೋಮಿನಾ ಕಾಲೇಜಿನಿಂದ ಸಹಕಾರ ನೀಡುತ್ತೇವೆ ಎಂದರು.
ಮುಖ್ಯ ಅತಿಥಿಯಾಗಿ ಪ್ರೇರಣಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಂಟ್ಯಾಣ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಜೀವನದ ದೂರದೃಷ್ಟಿಯಿದೆ. ಜೀವನದ ದೂರದೃಷ್ಟಿ ಹೀಗೇಯೇ ಸಾಗಬೇಕು ಎನ್ನುವ ಸ್ಪಷ್ಟತೆಯ ಅರಿವು ಪ್ರೇರಣಾ ಹಾಗೂ ವಿಝ್ಡಮ್ ಸಂಸ್ಥೆಯಿಂದ ಲಭಿಸುತ್ತದೆ. ಪ್ರೇರಣಾ ಸಂಸ್ಥೆ ಮುಂದಿನ ದಿನಗಳಲ್ಲಿ ವಿಝ್ಡಮ್ ಸಂಸ್ಥೆಯೊಂದಿಗೆ ಕೈಜೋಡಿಸಲಿದ್ದು, ವಿದ್ಯಾರ್ಥಿಗಳ ಭವಿಷ್ಯದ ಅಭಿವೃದ್ಧಿಗೆ ದುಡಿಯೋಣ ಎಂದರು.
ಸಂಪ್ಯ ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು, ಆರಾಧ್ಯ ಆರ್ಕೇಡ್ ಮಾಲಕ ಕರುಣಾಕರ ರೈ ರೂಪರೇಖಾ ಆಳ್ವ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಭಾಸ್ಕರ ರೈ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಫ್ರಾನ್ಸಿಸ್ಕಾ ತೇಜ್, ಸಂಸ್ಥೆಯ ಸಂಸ್ಥಾಪಕ ಡಾ.ಗುರು ತೇಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ದೀಪಕ್ ಬೇಲೂರ್ ವಂದಿಸಿದರು. ಕೇಂದ್ರದ ಮುಖ್ಯಸ್ಥ ಭರತ್ ಕುಮಾರ್ ಸಹಕರಿಸಿದರು. ಅಕ್ಷಯ ಕಾಲೇಜಿನ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.