ಕಾಣಿಯೂರು: ಕಡಬ ತಾಲೂಕಿನ ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಉಡುಪಿ ಶ್ರೀ ಕಾಣಿಯೂರು ಮಠದ ‘ಕಾಣಿಯೂರು ಜಾತ್ರೆ’ ಫೆ.26 ರಿಂದ ಆರಂಭಗೊಂಡಿದ್ದು, ಮಾ.1 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಆದೇಶದಂತೆ ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.28 ಬುಧವಾರ ಬೆಳಿಗ್ಗೆ 7 ರಿಂದ ಮಲ್ಲಾರ ನೇಮ, ದೈಯರ ನೇಮ, ರಾತ್ರಿ 8 ರಿಂದ ಬಯ್ಯದ ಬಲಿ ನಡೆಯಲಿದೆ.
ಫೆ.29 ಗುರುವಾರ ಮಧ್ಯಾಹ್ನ 12 ರಿಂದ ಎಲ್ಯಾರ ದೈವದ ನೇಮ, 1 ಕ್ಕೆ ಅನ್ನಸಂತರ್ಪಣೆ, 3 ರಿಂದ ಮಾಣಿ ದೈವದ ನೇಮ, ನಾಯರ್ ನೇಮ ನಡೆದು ಬಳಿಕ ಧ್ವಜಾವರೋಹಣ ನಡೆಯಲಿದೆ. ಮಾ.1 ಶುಕ್ರವಾರ ಬೆಳಿಗ್ಗೆ 9 ರಿಂದ ಶ್ರೀ ಕಾಣಿಯೂರು ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 3 ರಿಂದ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಲಿದೆ ಎಂದು ಶ್ರೀ ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.