ಕಡಬ: ಕಡಬ ತಾಲೂಕಿನ ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವ ಮಾ.9 ಶನಿವಾರ ಕುದ್ಮಾರು ಕಟ್ಟತ್ತಾರು ಕಟ್ಟೆಯಲ್ಲಿ (ದೈಪಿಲ ದ್ವಾರದ ಬಳಿ) ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 7.15 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು, ರಾತ್ರಿ 9 ಕ್ಕೆ ಅನ್ನಸಂತರ್ಪಣೆ ನಡೆಯುವುದು.
ರಾತ್ರಿ 10 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವ ಹಾಗೆ ಸಪರಿವಾರ ದೈವಗಳ ನೇಮೋತ್ಸವ ನಡೆದು ಬಳಿಕ ಎಲ್ಲಾ ಗ್ರಾಮಸ್ಥರಿಗೆ ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಲಿದೆ. 1.30 ಕ್ಕೆ ಚಾಪಲ್ಲ ಗಡಿಗೆ ಮಾರಿ ಹೋಗವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾಗಿ ಪದ್ಮಯ್ಯ ಗೌಡ ಅನ್ಯಾಡಿ, ಮೋನಪ್ಪ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ದೇವಣ್ಣ ಗೌಡ ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷರಾಗಿ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷರಾಗಿ ಎ.ಆನಂದ ಅನ್ಯಾಡಿ, ಚೆನ್ನಪ್ಪ ಗೌಡ ನೂಜಿ ದರ್ಖಾಸ್ತು, ದೇವಪ್ಪ ಗೌಡ ನಡುಮನೆ, ಐತ್ತಪ್ಪ ಗೌಡ ಕುವೆತ್ತೋಡಿ, ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರಧಾನ ಕಾರ್ಯಯಾಗಿ ನಾಗೇಶ್ ಕೆಡೆಂಜಿ, ಜತೆ ಕಾರ್ಯದರ್ಶಿಯಾಗಿ ಶೂರಪ್ಪ ಗೌಡ ಪಟ್ಟೆತ್ತಾನ, ಕುಶಾಲಪ್ಪ ಗೌಡ ಕಾರ್ಲಾಡಿ, ಕೋಶಾಧಿಕಾರಿಯಾಗಿ ಉಮೇಶ್ ಕೆರೆನಾರು, ಆಡಳಿತ ಮಂಡಳಿ ಸದಸ್ಯರಾಗಿ ಯೋಗೀಶ್ ಕೆಡೆಂಜಿ, ಸುಬ್ರಾಯ ಗೌಡ ಕೆರೆನಾರು, ಶಿವಪ್ಪ ಗೌಡ ಕಾಪೆಜಾಲು, ಮಹಾಲಿಂಗ ಗೌಡ ಹೊಸೊಕ್ಲು, ವೆಂಕಟೇಶ್ ಭಟ್ ಕೊಯಕ್ಕುಡೆ, ದಾಮೋದರ ಗೌಡ ನಾಕಿರಣ, ಚೆನ್ನಪ್ಪ ಗೌಡ ಅನ್ಯಾಡಿ, ಮೇದಪ್ಪ ಗೌಡ ಕುವೆತ್ತೋಡಿ, ಚಂದ್ರಶೇಖರ ಬರೆಪ್ಪಾಡಿ, ಪದ್ಮನಾಭ ದೋಳ, ಲೋಕೇಶ್ ಬಿ.ಎನ್.ಬರೆಪ್ಪಾಡಿ, ದೇವರಾಜ್ ನೂಜಿ, ಜನಾರ್ದನ ಗೌಡ ಕೂರ, ಸೋಮಪ್ಪ ಗೌಡ ಅನ್ಯಾಡಿ, ಸತೀಶ್ ಹೊಸೊಕ್ಲು, ಪೂವಣಿ ಗೌಡ ಅನ್ಯಾಡಿ, ಶಿವಾನಂದ ಕೆಡೆಂಜಿಕಟ್ಟ, ದಿನೇಶ್ ಅನ್ಯಾಡಿ, ರೇವತಿ ವಾಲ್ತಾಜೆ ಕುದ್ಮಾರು, ಪುಷ್ಪಲತಾ ಪಿ.ಗೌಡ ಕುದ್ಮಾರು, ಜನಾರ್ದನ ಗೌಡ ಅನ್ಯಾಡಿ, ಲೋಕನಾಥ್ ವಜ್ರಗಿರಿ ಕಾರ್ಯ ನಿರ್ವಹಿಸುತ್ತಿದ್ದಾರೆ.