ಪುತ್ತೂರು: ತುಳುಕೂಟ ಪುತ್ತೂರು ವತಿಯಿಂದ ‘ತುಳುವೆರೆ ಮೇಳೊ-2024’ ಹಾಗೂ ‘ತೆನೆಸ್ ಮೇಳೊ’ ಮಾ.2 ಹಾಗೂ 3 ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ ಮಾ.2 ಶನಿವಾರ ಮಧ್ಯಾಹ್ನ 2 ಗಂಟೆಗೆ ಬೇರೊದ ಕಲವನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಉದ್ಘಾಟಿಸಲಿದ್ದು, ಮೂಡಾಯಿ ತೆನೆಸ್ ದ ಕಲವನ್ನು ಡಾ. ಸುರೇಶ್ ಪುತ್ತೂರಾಯ ಉದ್ಘಾಟಿಸುವರು. ಪಡ್ಡಾಯಿ ತೆನೆಸ್ದ ಕಲವನ್ನು ಅಭಿಮಾನ್ ಹೊಟೇಲ್ ಮಾಲಕ ಅಭಿಜಿತ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಪುತ್ತೂರು ಜನ್ಮ ಫೌಂಡೇಶನ್ ನ ಡಾ. ಹರ್ಷಕುಮಾರ್ ರೈ ಮಾಡಾವು ಪಾಲ್ಗೊಳ್ಳುವರು. ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.
ಸಂಜೆ 3.30 ಕ್ಕೆ ತುಳು ಪದ ನಲಿಕೆ, 5.30 ರಿಂದ ಪುರುಷರಕಟ್ಟೆ ಗುರುಕುಲ ಕಲಾ ಕೇಂದ್ರದ ವತಿಯಿಂದ ಗಾನ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. 7 ಗಂಟೆಗೆ ತುಡರ್ ಮದಿಪು, ಬಳಿಕ ಮಣಿನಾಲ್ಕೂರು ನಾದ ವತಿಯಿಂದ ಕತ್ತಲ ಹಾಡು ಪ್ರಸ್ತುತಿಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಾ.3 ಭಾನುವಾರ ಬೆಳಿಗ್ಗೆ 10.30 ಕ್ಕೆ ನಡೆಯುವ ತುಳುವೆರೆ ಮೇಳೊ-2024 ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಅಶೋಕ್ ಕುಮಾರ್ ರೈ ಪಾಲ್ಗೊಳ್ಳಲಿದ್ದು, ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಉದ್ಯಮಿ ಕೆ.ವಿಶ್ವಾಸ್ ಶೆಣೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಡಾ. ಭಾಸ್ಕರ್ ಎಸ್., ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಆರ್ಯಾಪು ಸಿ .ಎ ಬ್ಯಾಂಕ್ ಅಧ್ಯಕ್ಷ ಮಹಮ್ಮದಾಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು (ತುಳು ಸಾಹಿತ್ಯ), ಯೂಸುಫ್ ಉಪ್ಪಿನಂಗಡಿ (ತುಳು ನಾಟಕ), ಕೊಳ್ತಿಗೆ ನಾರಾಯಣ ಗೌಡ (ತುಳು ಯಕ್ಷಗಾನ), ಯಮುನಾ ಪೂಜಾರಿ ನರಿಮೊಗರು (ನಾಟಿ ವೈದ್ಯೆ) ಹಾಗೂ ಗುಬ್ಬಿ ಕೆಮ್ಮಾರ (ತುಳು ಸಂಸ್ಕೃತಿ, ಪಾಡ್ಡನ, ಸಂದಿ) ಅವರಿಗೆ ಬಿರ್ದ್ ದ ತುಳುವೆರ್ ಪುತ್ತೂರು ತಾಲೂಕು ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಮಧ್ಯಾಹ್ನ 12 ಕ್ಕೆ ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ ನೆನಪು “ತುಳುವಾಮೃತ”, 2 ಕ್ಕೆ ಕಬಿ ಕೂಟೊ, 4 ಕ್ಕೆ ತುಳು ಮನರಂಜನೆಲು, 4 ರಿಂದ 5.30 ರ ತನಕ ಯಕ್ಷಗಾನ ತಾಳಮದ್ದಳೆ ‘ಸಮರ ಸೌಗಂಧಿಕಾ’, 5.30 ರಿಂದ ಬಲೆ ತೆಲಿಪುಕೊ, 7 ರಿಂದ ನಾಟಕೊದ ವೇಳ್ಯೊ, ಬಳಿಕ ನಾಗೇಶ್ ಬಲ್ನಾಡು ನಿರ್ದೇಶನದ ‘ನಂಬಿಕೆ ದಾಯೆಗ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಳುವೆರೆ ಮೇಳೊ ಸಮಿತಿ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ, ಜತೆಕಾರ್ಯದರ್ಶಿ ಉಲ್ಲಾಸ್ ಪೈ ಉಪಸ್ಥಿತರಿದ್ದರು.