ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತನ್ನ ತವರು ರಾಜ್ಯವಾದ ಗುಜರಾತಿನಲ್ಲಿ ಇಂದು ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.
ಈ 2.5 ಕಿ.ಮೀ ಉದ್ದದ ಸೇತುವೆ ಭಾರತದಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ
ಸೇತುವೆಯನ್ನು ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಓಖಾ-ಬೆಟ್ ದ್ವಾರಕಾ ಸಿಗ್ನಚರ್ ಸೇತುವೆ ಎಂದೂ ಕರೆಯಲಾಗುತ್ತದೆ. ಈ ಸೇತುವೆಯು ದ್ವಾರಕಾಧೀಶ
ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಅನುಕೂಲಕರವಾಗಿದೆ.
ಓಖಾ ಮುಖ್ಯ ಭೂಭಾಗವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ ಸುದರ್ಶನ್ ಸೇತುವೆ ಈ ಪ್ರದೇಶದ ಸಂಪರ್ಕಕ್ಕೆ ಹೊಸದಿಕ್ಕನ್ನು ನೀಡಲಿದೆ. ಇದರಲ್ಲಿ ಫುಟ್‌ಪಾತ್‌ನ ಮೇಲ್ಬಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.
ಚತುಷ್ಪಥ ಸೇತುವೆಯ ಎರಡೂ ಬದಿಯಲ್ಲಿ 50 ಮೀಟರ್ ಅಗಲದ ಫುಟ್‌ಪಾತ್ ಇದೆ. ನರೇಂದ್ರ ಮೋದಿ ಅಕ್ಟೋಬರ್ 2017ರಲ್ಲಿ ಸೇತುವೆ ಕಾಮಗಾರಿಗೆ ಅಡಿಪಾಯ ಹಾಕಿದ್ದರು. ಸುದರ್ಶನ ಸೇತುವೆ ಭಗವದ್ಗೀತೆಯ ಶ್ಲೋಕಗಳು ಮತ್ತು ಎರಡೂ ಬದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿಯನ್ನು ಹೊಂದಿದೆ.