ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಐಕ್ಯೂಏಸಿ ಮತ್ತು ಇಕೋ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕೃಷಿಕ, ಕಡಮ್ಮಾಜೆ ಫಾರ್ಮ್ಸ್ ಮಾಲಕ ದೇವಿಪ್ರಸಾದ್ ಕಡಮ್ಮಾಜೆ ಮಾಹಿತಿ ನೀಡಿ, ಕೃಷಿಗೆ ಗಡಿ ಎಂಬುದಿಲ್ಲ. ಆದರೆ ಅದಕ್ಕೆ ಬೇಕಾದುದು ಆಸಕ್ತಿ. ಹಿಂದಿನ ಕೃಷಿ ಪದ್ಧತಿ ಮತ್ತು ಈಗಿನ ಕೃಷಿ ಪದ್ಧತಿಯನ್ನು ತುಲನಾತ್ಮಕವಾಗಿ ತಿಳಿಸಿದರು. ಈಗಿನ ಕೃಷಿ ಚಟುವಟಿಕೆಗಳೆಲ್ಲವೂ ತಂತ್ರಜ್ಞಾನದ ಮೂಲಕವೇ ನಡೆಯುತ್ತಿದೆ, ಎಲ್ಲವೂ ನೂತನ ಕ್ರಮವನ್ನು ಅನುಸರಿಸುತ್ತಾ ಇರುವಾಗ ನಾವು ಕೂಡಾ ಇದರೊಂದಿಗೆ ಈ ತಂತ್ರಜ್ಞಾನಕ್ಕೆ ಬದಲಾಗಬೇಕು ಎಂದ ಅವರು, ಆಧುನೀಕರಣವನ್ನು ಬಳಸಿಕೊಳ್ಳುವಾಗ ಅದರ ಲೋಪಗಳನ್ನು ತಿಳಿದುಕೊಂಡು ಬಳಸಿದರೆ ಉತ್ತಮ ಎಂದು ತಿಳಿಸಿದರು. ನಾವು ಬಳಸುವ ರಾಸಾಯನಿಕಗಳು ಮಣ್ಣಿನ ಸತ್ವವನ್ನು ಹಾಳು ಮಾಡುವಂತಿರಬಾರದು ಇದರ ಕುರಿತಾಗಿ ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು. ಇದರೊಂದಿಗೆ ಜೇಣು ಸಾಕಾಣಿಕೆ, ಮಳೆಕೊಯ್ಲಿನ ಮಹತ್ವ, ಸಿಟಿ ವೇಸ್ಟ್ ನಿಂದ ಗೊಬ್ಬರ ತಯಾರಿಕೆ, ಎರೆಹುಳು ಗೊಬ್ಬರದ ಕುರಿತಾಗಿ ಮಾಹಿತಿ ನೀಡಿದರು.
ಅತಿಥಿಯಾಗಿ ವಕೀಲ, ಅತಿಥಿ ಉಪನ್ಯಾಸಕ ಮನೋಹರ್ ಎ. ತಮ್ಮ ಬಾಲ್ಯದ ಕೃಷಿ ಚಟುವಟಿಕೆ ಮತ್ತು ಕೃಷಿಯ ಕುರಿತಾದ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲೆ ಅಕ್ಷತಾ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಪ್ರಾಧ್ಯಾಪಕ, ಇಕೋ ಕ್ಲಬ್ ನ ಸಂಯೋಜಕಿ ದಿಶಾ, ಉಪನ್ಯಾಸಕ ತಿಲಕ್ ಟಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚಿಂತನ್ ಮತ್ತು ಗಿರೀಶ್ ಪ್ರಾರ್ಥಿಸಿದರು. ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿದರು. ವರದಶಂಕರ್ ಸ್ವಾಗತಿಸಿ, ಚಂದ್ರಿಕ ವಂದಿಸಿದರು.