ಪುತ್ತೂರು: ವಿಶ್ವಾಸಾರ್ಹ ಆಭರಣಗಳಿಗೆ ಹೆಸರುವಾಸಿಯಾದ ‘ಸುಲ್ತಾನ್ ಡೈಮಂಡ್ & ಗೋಲ್ಸ್’ನ 10ನೇ ಶಾಖೆ ಪುತ್ತೂರಿನ ಏಳ್ಮುಡಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಜ್ ಟವರ್ಸ್‍ನಲ್ಲಿ ಗುರುವಾರ ಅದ್ದೂರಿಯಾಗಿ ಶುಭಾರಂಭಗೊಂಡಿತು.
ಬಹುಭಾಷಾ ಖ್ಯಾತ ಚಿತ್ರನಟಿ ಪ್ರಿಯಾಮಣಿ ದೀಪ ಬೆಳಗಿಸುವ ಮೂಲಕ ಶೋರೂಂಗೆ ಚಾಲನೆ ನೀಡಿ ಮಾತನಾಡಿ, ಪುತ್ತೂರು: ಚಿನ್ನಾಭರಣ ಮಳಿಗೆಗೆ ಪ್ರೀತಿಯಿಟ್ಟು ಆಗಮಿಸಿ, ಪ್ರತಿಯೊಬ್ಬರೂ ನೀಡುವ ಪ್ರೋತ್ಸಾಹಕ್ಕೆ ಖುಷಿಯನ್ನು ನೀಡುತ್ತಿದೆ. ಸುಲ್ತಾನ್ ಗುಣಮಟ್ಟದ ವಿಚಾರದಲ್ಲಿ ಒಳ್ಳೆಯ ಕೆಲಸ ನಿರ್ವಹಿಸಿ ಉತ್ತಮ ಸಂಗ್ರಹವನ್ನು ಹೊಂದಿದೆ. ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಹೃದಯಕ್ಕೆ ಹತ್ತಿರವಾದ ಸಂಸ್ಥೆಯಾಗಿದೆ. ನಿಶ್ಚಿತಾರ್ಥದಲ್ಲಿ ಧರಿಸಿದ ಉಂಗುರಗಳನ್ನು ಒಟ್ಟಿಗೆ ಮಾಡಿ ಆರು ವರ್ಷದಿಂದ ಕೈಯಲ್ಲಿ ಧರಿಸಿಕೊಂಡು ಬಂದಿದ್ದು, ಇದು ಸುಲ್ತಾನ್ ನ ಶಕ್ತಿಯಾಗಿದೆ. ಪುತ್ತೂರಿನಲ್ಲಿ ಈಗ 10 ನೇ ಶಾಖೆಯ ಉದ್ಘಾಟನೆಯಾಗಿದ್ದು, 100 ಶಾಖೆಗಳನ್ನು ಹೊಂದುವಂತಾಗಲಿ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ವೈವಿಧ್ಯಮಯ ವಜ್ರದ ಸಂಗ್ರಹವನ್ನು ಅನಾವರಣಗೊಳಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನ ಮುತ್ತು ಚಿನ್ನದ ನಗರಿಗೆ ಮತ್ತೊಂದು ಚಿನ್ನದ ಗರಿಯನ್ನು ಸುಲ್ತಾನ್ ಶುಭಾರಂಭಗೊಳಿಸುವ ಮೂಲಕ ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಗೃಹಿಣಿಯರಿಗೆ, ನಾಗರಿಕರಿಗೆ ಮನದಿಚ್ಛೆಯ ಚಿನ್ನ ಹಾಗೂ ವಜ್ರಗಳ ಮಾರಾಟ ಸೇವೆಯಲ್ಲಿ ತೊಡಗಿಸಿಕೊಂಡು ಜನಸಮೂಹದ ವಿಶ್ವಾಸಾರ್ಹ ಗಳಿಸಿ ಸೇವೆ ನೀಡುವಂತಾಗಲಿ ಎಂದರು.
ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಆಂಟಿಕ್ ಸಂಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದರು. ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ಚಿನ್ನಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಪಾಲ್ಗೊಂಡು ಶುಭ ಹಾರೈಸಿದರು.
ಸುಲ್ತಾನ್ ಗೋಲ್ಡ್ & ಡೈಮಂಡ್ಸ್ ನ ನಿರ್ದೇಶಕರಾದ ಡಾ.ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಸ್ವಾಗತಿಸಿದರು. ಹಲವಾರು ಗಣ್ಯರು ಆಗಮಿಸಿ ಶುಭ ಸಂಸ್ಥೆಗೆ ಶುಭ ಹಾರೈಸಿದರು.