ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡದಿಂದ ಮೂವರು ಹೆಸರು ಈಗಾಗಲೇ ಕೇಳಿ ಬರುತ್ತಿದ್ದು, ಹಿರಿಯ ಮುಖಂಡ ಮಾಜಿ ಸಚಿವ ಬಿ. ರಮಾನಾಥ ರೈ, ಯುವ ಮುಖಂಡ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಯುವ ಕಾಂಗ್ರೆಸ್ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್ ಗೌಡ ಬುಡ್ಲೆಗುತ್ತು. ಈ ಮೂವರಲ್ಲಿ ಒಬ್ಬರನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ.
ಜಿಲ್ಲೆಯ 8 ವಿದಾನಸಭಾ ಕ್ಷೇತ್ರದ ಬ್ಲಾಕ್ ಗಳು ರಮಾನಾಥ ರೈ ಹೆಸರನ್ನು ಶಿಫಾರಸ್ಸು ಮಾಡಿ ಕೆಪಿಸಿಸಿಗೆ ಕಳುಹಿಸಿದ್ದು, ಸತತ ಮೂರು ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ರಮಾನಾಥ ರೈ ಹೆಸರು ಅಂತಿಮಗೊಳ್ಳುವ ಸಾಧ್ಯತೆಯೆ ಅಧಿಕವಾಗಿದೆ. ಪಟ್ಟಿಯಲ್ಲಿರುವ ಇನ್ನಿಬ್ಬರು ಆಕಾಂಕ್ಷಿಗಳು ಚುನಾವಣಾ ರಾಜಕೀಯಕ್ಕೆ ಹೊಸಬರಾಗಿದ್ದು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹೆಚ್ಚು ಪರಿಚಿತರಲ್ಲದಿರವುದು ಅವರಿಬ್ಬರಿಗೆ ಹಿನ್ನಡೆಯಾಗುವ ಸಾಧ್ಯತೆಯೂ ಕಂಡು ಬರುತ್ತಿದೆ.
ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ಎಲ್ಲಾ ಲಕ್ಷಣಗಳು ಕಂಡುತ್ತಿದ್ದು, ಈ ಹಿನ್ನಲೆಯಲ್ಲಿ ಎರಡು ತಿಂಗಳ ಮೊದಲು ಕಾಂಗ್ರೆಸ್ ಸಮಾವೇಶ ಆಯೋಜಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿವಸನ ಕಾರ್ಯಕ್ಕೆ ಸಜ್ಜಾಗಿದೆ. ಈ ಮೂಲ ಕರ್ನಾಟಕದಲ್ಲಿ ಬಹಯತೇಕ ಸ್ಥಾನಗಳನ್ನು ಮರಳಿ ಪಡೆಯಲು ಹವಣಿಸುತ್ತಿದೆ.
ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸ್ವಂತ ಬಲದಿಂದ ಆಡಳಿತ ನಡೆಸುತ್ತಿದ್ದು, ಅದರಲ್ಲಿ ಕರ್ನಾಟಕ ಕೂಡ ಒಂದಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಪಕ್ಷದ ಕೈ ತಪ್ಪಿ ಬರೋಬ್ಬರಿ 33 ವರ್ಷಗಳು ಸಂದಿದೆ. ಸತತ 8 ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ರುಚಿ ಉಂಡಿತ್ತು. ಅದಕ್ಕೆ ಮೊದಲು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಬಿಜೆಪಿಯ ಗೆಲುವಿನ ನಾಗಲೋಟವನ್ನು ತುಂಡರಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ವತಿಯಿಂದ ಇಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಡಿ. ಸಿ. ಎಂ. ಡಿ. ಕೆ ಶಿವಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೆವಾಲ ಭಾಗವಹಿಸಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ನಡುವೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪ್ರಭಾವಿ ಬಿಲ್ಲವ ಮುಖಂಡ. ಮುಸ್ಲಿಂರನ್ನು ಹೊರತುಪಡಿಸಿ ಈ ಲೋಕಸಬಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯಕ್ಕೆ ಈ ಬಾರಿ ಟಿಕೆಟ್ ನೀಡಬೇಕು ಎಂಬ ಕೂಗು ಒಂದು ವರ್ಗದಿಂದ ಕೇಳಿ ಬರುತ್ತಿದೆ. ಜನಾರ್ಧನ ಪೂಜಾರಿ ಬಳಿಕ ಈ ಕ್ಷೇತ್ರದಲ್ಲಿ ಬಿಲವ ಸಮುದಾಯಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿಲ್ಲ.
ಬಿಜೆಪಿಯ ಹಿಂದೂತ್ವ ರಾಜಕಾರಣಕ್ಕೆ ಕಾಂಗ್ರೆಸ್ ಜಾತಿ ಸಮೀಕರಣದ ಮೂಲಕ ಪ್ರತ್ಯುತ್ತರ ನೀಡಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ ಥಿಂಕ್ ಟ್ಯಾಂಕ್ ನಲ್ಲಿದೆ. ಹಾಗೊಮ್ಮೆ ಬಿಲ್ಲವ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಮುಂದಾದರೇ ಆಗ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಪದ್ಮರಾಜ್ ಆರ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ವೃತ್ತಿಯಲ್ಲಿ ವಕೀಲರು ಆಗಿರುವ ಪದ್ಮರಾಜ್ ಅತ್ಯುತ್ತಮ ಸಂಘಟಕರೂ ಆಗಿದ್ದಾರೆ. ಆದರೂ ಕಾಂಗ್ರೆಸ್ ನಲ್ಲಿರುವ ಇತರ ಬಿಲ್ಲವ ಮುಖಂಡರೆ ಅವರ ಅಭ್ಯರ್ಥಿತನಕ್ಕೆ ಅಡ್ಡಗಾಲು ಹಾಕುತ್ತಿರುವುದು ಅವರಿಗಿರುವ ದೊಡ್ಡ ಹಿನ್ನಡೆ.
ದಕ್ಷಿಣ ಕನ್ನಡ ಲೋಕಸಬಾ ವ್ಯಾಪ್ತಿಯಲ್ಲಿ ಮೂರನೇ ಅತೀ ದೊಡ್ಡ ಸಮುದಾಯ ಒಕ್ಕಲಿಗ ಗೌಡರದು. ಇಷ್ಟು ದೊಡ್ಡ ಪ್ರಮಾಣದಲ್ಲಿ ಒಕ್ಕಲಿಗ ಸಮುದಾಯದ ಮತದಾರರಿದ್ದು, ಲೋಕಸಭೆ ಅಥಾವ ವಿಧಾನಸಭೆಯಲ್ಲಿ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ. ಈ ಕೊರಗು ಸಮುದಾಯದ ಮತದಾರರನ್ನು ಬಹಳವಾಗಿ ಕಾಡುತ್ತಿದೆ. 1990ಕ್ಕಿಂತ ಮೊದಲು ಗೌಡ ಸಮುದಾಯ ಸಾರಸಾಗಾಟಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತಿತ್ತು ಆದರೇ ರಾಮಮಂದಿರ ಹೋರಾಟ ಹಾಗೂ 1993 ರಲ್ಲಿ ಸುಳ್ಯದಲ್ಲಿ ಮಠಾದೀಶರೊಬ್ಬರ ಕಾರಿಗೆ ಕಲ್ಲು ಬಿದ್ದ ಪ್ರಕರಣದ ಬಳಿಕ ಗೌಡ ಸಮುದಾಯ ಕಾಂಗ್ರಸ್ ನಿಂದ ಬಿಜೆಪಿಯತ್ತ ವಾಲಿತ್ತು. ಇದರ ಪರಿಣಾಮವೇ ಗೌಡ ಸಮುದಾಯದ ಬೆಲ್ಟ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಲೀಡ್ ಪಡೆದುಕೊಳ್ಳಲು ಆರಂಭಿಸಿ ದಕ ಕ್ಷೇತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಆದರೇ 8 ಬಾರಿ ಇಲ್ಲಿ ಗೆಲುವು ಸಾಧಿಸಿದರೂ ಒಂದು ಬಾರಿ ಮಾತ್ರ ಗೌಡ ಸಮುದಾಯ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಇದು ಗೌಡ ಸಮುದಾಯದ ನಾಯಕರ ಅಸಹನೆಗೆ ಕಾರಣವಾಗಿದ್ದು, ಇದರ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಗೌಡ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಸಾಧ್ಯತೆಯೂ ಇದೆ. ಹೀಗಾಗಿ ಪಕ್ಷದಲ್ಲಿ ಸಕ್ರಿಯವಾಗಿರುವ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿಯಾಗಿರುವ ಯುವ ನಾಯಕನೊಬ್ಬನ ಹುಡುಕಾಟಕ್ಕೆ ಕಾಂಗ್ರೆಸ್ ಮುಂದಾಗಿತ್ತು, ಪ್ರಭಾವಿ ಒಕ್ಕಲಿಗ ನಾಯಕ ಸುಳ್ಯದ ಕಿರಣ್ ಗೌಡ ಬುಡ್ಲೆಗುತ್ತು ಹೆಸರು ಮುಂಚೂಣಿಗೆ ಬಂದಿದೆ. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಒಕ್ಕಲಿಗ ಸಂಘ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿರುವ ಕಿರಣ್ ಗೌಡ ಬುಡ್ಡೆಗುತ್ತು 2018ರಲ್ಲಿ ಯುವ ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.