ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ ಕ್ಕೆ ಚಾಲನೆ | ಫೆ.29 ರ ತನಕ ನಡೆಯಲಿದೆ ಕರಿಮಣಿ ಉತ್ಸವ

ಪುತ್ತೂರು:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ’ಕ್ಕೆ ಫೆ.16 ರಂದು ಚಾಲನೆ ನೀಡಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾ ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಾಂಗಲ್ಯದಲ್ಲಿ ಮಂಗಲ ಶಬ್ಧವಿದೆ. ಮಂಗಲವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸಿದಾಗಲೇ ಮುತ್ತೈದೆಭಾಗ್ಯದ ಜೊತೆಗೆ ಗೃಹಿಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ 2 ಗ್ರಾಂನಿಂದ ಪ್ರಾರಂಭಿಸಿ ಅತ್ಯಧಿಕ ಚಿನ್ನದ ತನಕ ಗ್ರಾಹಕರಿಗೆ ದೊರೆಯಲಿದೆ. ಕನಿಷ್ಠ 2 ಗ್ರಾಂನ ಬೆಳ್ಳಿಯ ಕರಿಮಣಿ ಮತ್ತು ಚಿನ್ನದ ಕರಿಮಣಿ ಧರಿಸುವಂತ ಅವಕಾಶ ಮುಳಿಯ ಜ್ಯುವೆಲ್ಸ್ ಮೂಲಕ ದೊರೆಯಲಿದೆ. ಸಂಸ್ಥೆಯ ಶಾಖೆಗಳು ಇನ್ನಷ್ಟು ಪ್ರಾರಂಭವಾಗಲಿ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯಲಿ ಎಂದರು.

ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಪರಿಚಯಿಸಿದೆ. ಚಿನ್ನಾಭರಣಗಳ ಮಳಿಗೆ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದೆ. ಆಧುನಿಕತೆಯಲ್ಲಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳಿಗೆ ತಕ್ಕಂತೆ ಅವರವರ ಮನದಿಚ್ಚೆಯ ಕರಿಮಣಿಗಳನ್ನು ಧರಿಸಲು ಅವಕಾಶವಿದೆ. ಇದಕ್ಕಾಗಿ ಕರಿಮಣಿ ಉತ್ಸವದ ಮೂಲಕ ಹೊಸ ಹೊಸ ಶೈಲಿಯ, ಆಕರ್ಷಕ ವಿನ್ಯಾಸದ ಕರಿಮಣಿಗಳು ಉತ್ಸವದಲ್ಲಿ ಲಭ್ಯವಿದ್ದು ಕರಿಮಣಿ ಉತ್ಸವ ಫೆ.16ರಿಂದ ಪ್ರಾರಂಭಗೊಂಡು ಫೆ.29ರ ತನಕ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.



































 
 

ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಕೃಷ್ಣವೇಣಿ ಮುಳಿಯ, ಶೋರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜ‌ರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯಶ್ರೀ ಪ್ರಾರ್ಥಿಸಿದರು. ಯತೀಶ್ ಆಚಾರ್ಯ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

ಫೆ.16ರಿಂದ ಪುತ್ತೂರು ಹಾಗೂ ಬೆಳ್ತಂಗಡಿ ಶೋರೂಂನಲ್ಲಿ ಪ್ರಾರಂಭಗೊಂಡಿರುವ ಕರಿಮಣಿ ಉತ್ಸವ ಫೆ.29ರ ತನಕ ನಡೆಯಲಿದ್ದು ಇದರಲ್ಲಿ ನವನವೀನ ಮಾದರಿಯ, ವಿವಿಧ ವಿನ್ಯಾಸ ಕರಿಮಣಿ ಸರಗಳು ಅತೀ ಕಡಿಮೆ ಸುಮಾರು 2 ಗ್ರಾಂ ನಿಂದ ಪ್ರಾರಂಭಿಸಿ, ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಎಲ್ಲಾ ರೀತಿಯ ಕರಿಮಣಿ ಸರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top