ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ ಪ್ರಯುಕ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಅಗ್ರಪೂಜೆ ತಾಳಮದ್ದಲೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ಸುರೇಶ್ .ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಕುಂಬ್ಳೆ ಶ್ರೀಧರ ರಾವ್ (ಭೀಷ್ಮ), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಧರ್ಮರಾಯ), ದಿವಾಕರ ಆಚಾರ್ಯ ಗೇರುಕಟ್ಟೆ (ಸಹದೇವ ಮತ್ತು ಶ್ರೀ ಕೃಷ್ಣ), ಗೋಪಾಲ ಶೆಟ್ಟಿ ಕಳೆಂಜ (ಭೀಮ), ಗೀತಾ ಕುದ್ದಣ್ಣಾಯ (ಶಿಶುಪಾಲ), ಹರೀಶ ಆಚಾರ್ಯ ಬಾರ್ಯ (ದಂತವಕ್ತ್ರ) ಭಾಗವಹಿಸಿದ್ದರು.
ಮಹಾಲಿಂಗೇಶ್ವರ ಭಟ್ ಪೆರಿಯಡ್ಕಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.