ಪುತ್ತೂರು: ಬಡವರ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಇಲಾಖೆಯ ಖರ್ಚಿನಲ್ಲೇ ತೆರವು ಮಾಡಬೇಕು. ಮನೆಯ ಮೇಲೆ ತಂತಿ ಹೋಗಿರುವ ಕಾರಣ ಸಮಸ್ಯೆಯಾಗಿದ್ದು ಶೀಘ್ರ ತೆರವು ಮಾಡಬೇಕು ಎಂದು ಶಾಸಕ ಅಶೋಕ್ ರೈ ಇಂಧನಸಚಿವ ಕೆ. ಜೆ ಜಾರ್ಜ್ ಗೆ ಮನವಿ ಮಾಡಿದ್ದಾರೆ.
ಶಾಸಕರ ಪ್ರಶ್ನೆಗೆ ವಿವರಣೆ ನೀಡಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆಯವರು, ಮನೆ ಕಟ್ಟಿದ ಮೇಲೆ ತಂತಿ ಎಳೆದಿಲ್ಲ, ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ ಎಂಬ ಮಾಹಿತಿನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ಬಡವರಲ್ಲಿ ಇರುವುದೇ 5.ರಿಂದ 10 ಸೆಂಟ್ಸ್ ಜಾಗ. ಅದರಲ್ಲೇ ನೀವು ಲೈನ್ ಎಳೆದರೆ ಅವರು ಎಲ್ಲಿಮನೆ ಕಟ್ಟಬೇಕು. ಇದು ಮೆಸ್ಕಾಂ ನವರದ್ದೇ ಸಮಸ್ಯೆ. ಬಡವರ ಮನೆ ಮೇಲೆ ಹಾದು ಹೋಗಿರುವ ಎಲ್ಲಾ ತಂತಿಗಳನ್ನು ತೆರವು ಮಾಡಲೇಬೇಕು ಎಂದು ಹೇಳಿದರು.
ಪ್ರತಿಕ್ರಿಯಿಸಿದ ಸಚಿವ ಕೆ.ಜೆ ಜಾರ್ಜ್ ದೊಡ್ಡ ಸಮಸ್ಯೆಗಳಿರುವ ಮನೆಗಳನ್ನು ಪಟ್ಟಿ ಮಾಡಿ ಕ್ರಮಕೈಗೊಳ್ಳಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.