ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಹೋಬಳಿ ಘಟಕದ ಪದ ಸ್ವೀಕಾರ ಸಮಾರಂಭ ಫೆ.6 ಮಂಗಳವಾರ ಕೆದಂಬಾಡಿಯ ಸಿರಿ ಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ.
ನೂತನ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈ, ಕಾರ್ಯದರ್ಶಿಯಾಗಿ ಸಿ. ಶೇ ಕಜೆಮಾರ್, ಕೋಶಾಧ್ಯಕ್ಷರಾಗಿ ಎ.ಕೆ. ಜಯರಾಮ್ ರೈ, ಕೆಯ್ಯೂರು, ಸಂಘಟನಾ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಕೆ.ಎಸ್, ಮತ್ತು ಸದಸ್ಯರಾಗಿ ಪೂರ್ಣಿಮಾ ಪೆರ್ಲಂಪಾಡಿ, ಬಾಬು ಟಿ, ಡಾ ಮನಮೋಹನ್ ಎಂ., ಎಸ್. ಡಿ ವಸಂತ ಸರ್ವೆ ದೋಳ, ಎಸ್. ಪಿ. ಬಶೀರ್ ಶೇಖಮಲೆ, ಶಿಕ್ಷಣ ಸಂಯೋಜಕರು, ಪದ ನಿಮಿತ್ತ ) ಕುಂಬ್ರ ಕಾಲೇಜು ಪ್ರಾಂಶುಪಾಲರು ಪದ ಸ್ವೀಕಾರ ಮಾಡಲಿದ್ದಾರೆ
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕೆಯ್ಯೂರಿನಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಅಂದಿನ ಪುತ್ತೂರು ಕಸಾಪ ಅಧ್ಯಕ್ಷರಾದ ಬಿ ಐತಪ್ಪ ನಾಯ್ಕ್, ಅವರು ಇರಿಸಿದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ‘ಕೃಷಿ ಸಾಹಿತ್ಯ ಸಂಭ್ರಮ’ ಎಂಬ ಹೆಸರಿನಿಂದ ಪ್ರಕೃತಿಪರ ಕೃಷಿಕರಾದ ಮಿತ್ತಬಾಗಿಲಿನ ಬಿ.ಕೆ. ಪರಮೇಶ್ವರ್ ರಾವ್ ಅವರ “ಕೃಷಿ – ಸಾಹಿತ್ಯ ವೈವಿಧ್ಯ” ಎಂಬ ಉಪನ್ಯಾಸದ ಮೂಲಕ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ವಹಿಸಲಿದ್ದು, ಡಾ. ತಾಳ್ತಜೆ ವಸಂತಕುಮಾರ್ ಗೌರವ ಉಪಸ್ಥಿತತರಿರುವರು. ಮುಖ್ಯ ಅತಿಥಿಳಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಭಾರತೀಯ ಗೇರು ಸಂಶೋಧನಾ ಕೇಂದ್ರ ನಿರ್ದೇಶಕ ಡಾ. ದಿನಕರ ಅಡಿಗ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ ರೈ ಕೋರಂಗ ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಮುಂಡಾಳ ಗುತ್ತು ಪ್ರಶಾಂತ್ ರೈ ಅವರ ಬಳಗದವರಿಂದ “ಯಕ್ಷ ಸಾಹಿತ್ಯ ಸಂಭ್ರಮ” ಹಾಗೂ ಕಡೆಮಜಲು ಸುಭಾಶ್ ರೈ ಅವರ 74ರ ಸಂಭ್ರಮವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.