ಪುತ್ತೂರು: ಸಜಂಕಾಡಿ ಹಿ.ಪ್ರಾ. ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಯಶೋಧ ಧ್ವಜಾರೋಹಣಗೈದು ಶುಭಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಝಾಕ್, ನಿರ್ಗಮಿತ ಅಧ್ಯಕ್ಷ ಅಬೂಬಕ್ಕರ್, ಪೋಷಕ ಸತೀಶ್, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಗುರು ಸುಮಲತಾ ಸ್ವಾಗತಿಸಿ, ವಂದಿಸಿದರು.
ವಿದ್ಯಾರ್ಥಿಗಳಿಂದ ಹೊರಸಂಚಾರ:
ವಿದ್ಯಾರ್ಥಿಗಳಲ್ಲಿ ಸ್ಥಳೀಯ ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ‘ಇಕೋ ಕ್ಲಬ್ ‘ವತಿಯಿಂದ ಹೊರಸಂಚಾರ ಹಮ್ಮಿಕೊಳ್ಳಲಾಗಿತ್ತು.
ಅವಳಿ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆ, ಪುರಾತನ ಕಾಲದ ಬಾವಿ, ಬಲ್ಲಾಳರ ಕಾಲದ ಧರ್ಮ ಚಾವಡಿ, ಸಾಮರಸ್ಯ ಸಾರುವ ಮಸೀದಿ, ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮೂರಿನ ಇತಿಹಾಸದ ಬಗೆಗಿನ ಹಲವು ವಿಚಾರಗಳನ್ನು ತಿಳಿದುಕೊಂಡರು. ಪ್ರಭಾರ ಮುಖ್ಯಗುರು ಸುಮಲತಾ, ಶಿಕ್ಷಕರಾದ ಶಶಿಕಲಾ, ಆಯಿಷತ್ ಮಿಸ್ರಿಯಾ, ಗಣೇಶ್ ನಾಯಕ್ ಪುತ್ತೂರು ಉಪಸ್ಥಿತರಿದ್ದರು.