ಕಡಬ: ಎಣ್ಮೂರು ಕೋಟಿ-ಚೆನ್ನಯ ನಗರದ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ವತಿಯಿಂದ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಎಮ್ಮೂರಿನ ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬೆಳಗ್ಗೆ ಗಣಪತಿ ಹವನ, ಶ್ರೀರಾಮನಾಮ ತಾರಕ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಶ್ರೀರಾಮ ದೇವರಿಗೆ ಕಲಶಾಭಿಷೇಕ ನಡೆದು, ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಗಣರಾಜ ಕೆದಿಲ ಹಾಗೂ ಯತೀಶ್ ರೈ ದುಗಲಡ್ಕ, ಪ್ರಫುಲ್ಲಚಂದ್ರ ರೈ ಕುಂಜಾಡಿ, ರಾಮಕೃಷ್ಣ ರೈ ಕಟ್ಟಬೀಡು, ಅನುಪ್ ಕುಮಾರ್ ಆಳ್ವ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಕರಸೇವಕರಾದ ರಘುನಾಥ್ ರೈ ಕೆ. ಎನ್., ಶೋಭ ಆರ್. ರೈ ಕಟ್ಟಬೀಡು ಅಲೆಂಗಾರ, ಕಲ್ಯಾಣಿ ವಿಠಲ್ ಶೆಟ್ಟಿ ಎಣ್ಮೂರುಗುತ್ತುಗುತ್ತು, ಆನಂದ ಗೌಡ ಆರೆಂಬಿ, ಸುಮಾ ಜಣಿಯಡ್ಕ ಅಲೆಂಗಾರ, ಹೇಮವತಿ ಲಕ್ಷ್ಮಣ ಗೌಡ ಹೇಮಳ, ಬಾಲಕೃಷ್ಣ ಹೇಮಳ, ವಾಸುದೇವ ಗೌಡ ಅಲೆಂಗಾರ, ಹೊನ್ನಪ್ಪ ಗೌಡ ಐಪಳ ಹೇಮಳ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಣ್ಣೂರು ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.