ವಿಟ್ಲ: ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯನ್ ಕರ್ನಾಟಕದ ನೇತೃತ್ವದಲ್ಲಿ ಕೊಪ್ಪದ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಓಪನ್ ಪಂದ್ಯಾವಳಿ ‘ಕೊಪ್ಪ ಟ್ರೋಫಿ’ ಯಲ್ಲಿ ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ವಿಟ್ಲ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕುಮಿಟೆ ವಿಭಾಗದಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ – ಪ್ರಥಮ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ಪ್ರಥಮ, ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ರಿಯೋನ್ ಲಸ್ರಾದೊ – ದ್ವಿತೀಯ, ವಿಟ್ಲ ಜೇಸಿಸ್ ಶಾಲೆಯ ದ್ರುವ – ದ್ವಿತೀಯ, ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ – ದ್ವಿತೀಯ, ವಿಟ್ಲ ಮಾದರಿ ಶಾಲೆಯ ಸಾರ್ಥಕ್ – ದ್ವಿತೀಯ, ವಿಟ್ಲ ಜೇಸಿಸ್ ಶಾಲೆಯ ಸಾನ್ವಿ – ತೃತೀಯ ಸ್ಥಾನವನ್ನು ಪಡಗೊಂಡಿದ್ದಾರೆ.
ಕಟಾ ವಿಭಾಗದಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ – ಪ್ರಥಮ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ಪ್ರಥಮ, ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ – ಪ್ರಥಮ, ವಿಟ್ಲ ಮಾದರಿ ಶಾಲೆಯ ಸಾರ್ಥಕ್ – ಪ್ರಥಮ, ವಿಟ್ಲ ಜೇಸಿಸ್ ಶಾಲೆಯ ದ್ರುವ – ದ್ವಿತೀಯ, ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ರಿಯೋನ್ ಲಸ್ರಾದೊ – ತೃತೀಯ, ವಿಟ್ಲ ಜೇಸಿಸ್ ಶಾಲೆಯ ಸಾನ್ವಿ – ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ದಿಲೀಪ್, ರೋಹಿತ್ ಎನ್.ಎಸ್., ನಿಖಿಲ್ ಕೆ.ಟಿ. ತರಬೇತಿ ನೀಡಿದ್ದಾರೆ.