ಪುತ್ತೂರು: ಜ.22 ರಂದು ಆಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಪುತ್ತೂರು ರಾಮಕ್ಷತ್ರೀಯ ಸಮಾಜ ಬಾಂಧವರಿಂದ ಪುತ್ತೂರು ಕೆಮ್ಮಿಂಜೆಯಲ್ಲಿರುವ ಶ್ರೀರಾಮ ಭಜನಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಸೋಮವಾರ ಕೆಮ್ಮಿಂಜೆ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮರಕ್ಷಾಸ್ತ್ರೋತ್ರ ವಿಷ್ಣು ಸಹಸ್ರನಾಮ, 11 ಗಂಟೆಯಿಂದ ಭಜನೆ ಭಜನೆ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಶ್ಯಾಮಣ್ಣ, ಸಂಚಾಲಕ ಭಾಸ್ಕರ್ ಮರೀಲ್, ಸಂಘದ ಅರುಣ್ ಕುಮಾರ್, ನಿತೀನ್ ಕುಮಾರ್ ಮಂಗಳಾ, ಕಿರಣ್ ಕುಮಾರ್, ವಿಜಯಲಕ್ಷ್ಮಿ, ರಶ್ಮಿ, ಅಶೋಕ್, ಸತೀಶ್ ಬಲ್ನಾಡು, ಪುಷ್ಪಾ ಟೀಚರ್, ದಯಾನಂದ ಅತ್ತಾಳ ಕೆಮ್ಮಿಂಜೆ, ಬಾಲಚಂದ್ರ ಮೊಟ್ಟೆತ್ತಡ್ಕ, ಯುವ ಸಂಘದ ಅಧ್ಯಕ್ಷ ಅನೀಶ್ ಕುಮಾರ್ ಮರೀಲ್, ಮತ್ತಿತರರು ಉಪಸ್ಥಿತರಿದ್ದರು.