ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣದ ಮೂಲಕ ಭಾನುವಾರ ಚಾಲನೆ ನೀಡಲಾಯಿತು.
ಜ.21 ರ ತನಕ ನಡೆಯುವ ಜಾತ್ರೋತ್ಸವದ ಅಂಗವಾಗಿ ಜ.14 ರಂದು ಬೆಳಿಗ್ಗೆ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ಇಂದು ರಾತ್ರಿ 8.30 ಕ್ಕೆ ಶ್ರೀ ದೇವರಿಗೆ ಲಕ್ಷದೀಪೋತ್ಸವ, ಉತ್ಸವ ಬಲಿ, ಕಟ್ಟೆಪೂಜೆ ಜರಗಲಿದೆ. ಸಂಜೆ 6 ಕ್ಕೆ ಅರಸು ಮುಂಡಲತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಲಿದೆ. 6.30 ರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30 ರಿಂದ ಚಾ ಪರ್ಕ ಕಲಾವಿದರಿಂದ ತೆಲಿಕೆದ ಬೊಲ್ಳಿ ದೇವದಾಸ್ ಕಾಪಿಕಾಡ್ ರಚಿಸಿ ನಟಿಸಿರುವ ‘ಪುದರ್ ದೀದಾಂಡ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.