ಪಥನಗೊಂಡಿದ್ದ ಭಾರತೀಯ ವಾಯುಸೇನೆ ವಿಮಾನದ ಅವಶೇಷ ಪತ್ತೆ | ಬರೋಬ್ಬರಿ 8 ವರ್ಷಗಳ ಬಳಿಕ ಪತ್ತೆ

ನವದೆಹಲಿ: 29 ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗಿದ್ದ ಎಎನ್‍-32 ವಿಮಾನ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಟ್ರಾನ್ಸ್‍ ಪೋರ್ಟ್‍ ವಿಮಾನದ ಅವಶೇಷಗಳು ಚೆನ್ನೈ ಕಡಲ ತೀರದಿಂದ 310 ಕಿ.ಮೀ. ಆಳದಲ್ಲಿ ಪತ್ತೆಯಾಗಿದ್ದು, ಈ ಕುರಿತು ಇಂಡಿಯನ್ ಏರ್‍ ಪೋರ್ಸ್ ನಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ಎಂಟು ವರ್ಷಗಳ ಹಿಂದೆ ಅಂದರೆ 2016 ಜುಲೈ 22 ರಂದು ಬೆಳಿಗ್ಗೆ ಈ ವಿಮಾನ ಚೆನ್ನೈನಿಂದ ಪೋರ್ಟ್‍ ಬ್ಲೇರ್ ಗೆ ಹೊರಟಿತ್ತು. 29 ಪ್ರಯಾಣಿಕರನ್ನು ಹೊತ್ತ ಈ ವಿಮಾನ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಗ್ರೌಂಡ್ ಸ್ಟೇಷನ್ ನೊಂದಿಗೆ ಎಲ್ಲಾ ಸಂಪರ್ಕ ಕಳೆದುಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ವಿಮಾನ ಹಾರಾಟದ ವೇಳೆ ರಾಡಾರ್ ನ ಸಂಪರ್ಕಕ್ಕೂ ಇದು ಸಿಕ್ಕಿರಲಿಲ್ಲ.

ಬಳಿಕ ಸಂಬಂಧಿತ ಇಲಾಖೆ ಶೋಧ ಕಾರ್ಯ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಭಾರತ ಈ ವರೆಗೆ ನಡೆಸಿರುವ ಅತೀ ದೊಡ್ಡ ಶೋಧ ಕಾರ್ಯಾಚರಣೆ ಇದಾಗಿತ್ತು. ಕಳೆದ 8 ವರ್ಷಗಳಿಂದ ಈ ವಿಮಾನದ ಅವಶೇಷಗಳು ಪತ್ತೆಯಾಗದ ಕಾರಣ ವಿಮಾನದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ ಎಂದು ಆ ಸಂದರ್ಭದಲ್ಲಿ ದೃಢೀಕರಿಸಲಾಗಿತ್ತು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top