ಪುತ್ತೂರು: ಸನ್ಯಾಸಿಯಾದವನು ಸಮಾಜದಿಂದ ಬೇರೆ ಇರಬಾರದು. ಜನರ ಜೊತೆಗಿರಬೇಕು. ಜನರಿಗಾಗಿ ಸನ್ಯಾಸಿಯ ಜ್ಞಾನ, ಹಸಿದವರಿಗೆ ಅನ್ನ ಕೊಡುವುದೇ ನಿಜವಾದ ಧರ್ಮ ಎಂದು ಖ್ಯಾತವಾಗ್ಮಿ, ಅಂಕಣಕಾರ ಪ್ರಕಾಶ ಮಲ್ಪೆ ಹೇಳಿದರು.
ಅವರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡಿ, ವಿವೇಕಾನಂದರು ಸ್ತ್ರೀಯರಿಗೆ ತುಂಬಾ ಗೌರವ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವೂ ಭಾರತೀಯತೆಯನ್ನು ಸಾಧಿಸಬೇಕಾಗಿದೆ. ಈ ಮೂಲಕ ಭಾರತೀಯತೆಯನ್ನು ಪ್ರಪಂಚದಲ್ಲೆಲ್ಲಾ ಪಸರಿಸಿ ಪ್ರಸಿದ್ಧರಾಗೋಣ ಎಂದರು.
ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಜ್ಞಾ ಪ್ರಾರ್ಥಿಸಿ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಉಪನ್ಯಾಸಕ ವಿಷ್ಣು ಪ್ರದೀಪ ಕಾರ್ಯಕ್ರಮ ನಿರೂಪಿಸಿದರು, ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.