ಭಾರತದ ಅತಿ ಉದ್ದದ ಸಮುದ್ರ ಸೇತುವೆ (ಟ್ರಾನ್ಸ್ ಹಾರ್ಬರ್ ಲಿಂಕ್) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಜ.12ರಂದು ಉದ್ಘಾಟಿಸಲಿದ್ದಾರೆ.
ಈ ಸೇತುವೆ ಮಾರ್ಗಕ್ಕೆ ‘ಅಟಲ್ ಸೇತು’ ಎಂದು ನಾಮಕರಣ ಮಾಡಲಾಗಿದೆ. ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ ಇದಾಗಿದ್ದು, ಸಮುದ್ರದ ಮೇಲೆ 16.5 ಕಿ.ಮೀ. ಮತ್ತು ನೆಲದ ಮೇಲೆ 5.5 ಕಿ.ಮೀ. ಉದ್ದವಿದ್ದು ಒಟ್ಟು 21.8 ಕಿ.ಮೀ. ಉದ್ದ ಹೊಂದಿದೆ. ಈ ಸೇತುವೆ ಮುಂಬೈನ ಸೆವ್ರಿಯಿಂದ ಆರಂಭಗೊಂಡು ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ.
ಸೇತುವೆ ನಿರ್ಮಾಣಕ್ಕೆ 18 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಅಟಲ್ ಸೇತುವಿನಲ್ಲಿ ನಾಲ್ಕು ಚಕ್ರಗಳ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಮೀ ಆಗಿದ್ದು, ಮೋಟಾರ್ ಬೈಕ್, ಆಟೋರಿಕ್ಷಾ ಮತ್ತು ಟ್ರಾಕ್ಟರ್‌ಗಳಿಗೆ ಸೇತುವೆ ಪ್ರವೇಶಕ್ಕೆ ಅವಕಾಶ ನಿಷೇಧಿಸಿದೆ. ಮಹಾರಾಷ್ಟ್ರ ಸರ್ಕಾರವು ಕಾರುಗಳಿಗೆ 250 ರೂ. ಏಕಮುಖ ಶುಲ್ಕ ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.