ಬಿಜೆಪಿ – ಕಾಂಗ್ರೆಸ್ ನಡುವೆ ರಾಮಮಂದಿರ ಜಟಾಪಟಿ ಮುಂದುವರಿದಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಡೆಯನ್ನು ಟೀಕಿಸುತ್ತಲೇ ಬರುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದೆ.
ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸದ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿರುವುದಲ್ಲದೇ, ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ ಎಂದೂ ಹೇಳಿಕೊಂಡಿದೆ.
ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಆದರೆ, ರಾಮನ ಹೆಸರು ಹೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ “ಬಿಜೆಪಿಗೆ ಸನ್ಮತಿ ದೇ ಭಗವಾನ್” ಎಂದು ಹೇಳಬೇಕಾಗಿ ಬಂದಿರೋದು ದುರಂತ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಮಾಹಿತಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ರಾಜೀವ್ ಗಾಂಧಿ ಅವರು ಮೊದಲ ಹೆಜ್ಜೆ ಇಡದೇ ಹೋಗಿದ್ದರೆ, ಬಿಜೆಪಿಯವರಿಗೆ ಇದರ ಆಲೋಚನೆಯೇ ಬರುತ್ತಿರಲಿಲ್ಲ ಎಂದೂ ಹೇಳಿದೆ.