ಬೈಕಿಗೆ ಪೆಟ್ರೋಲ್ ಹಾಕಿದ ಬಳಿಕ ಸವಾರ 210 ರೂ. ನೀಡಬೇಕಿತ್ತು. ಆದರೆ ಆತ ನೀಡಿದ್ದು ಕೇವಲ 10 ರೂ. ಮಾತ್ರ.
ಪೆಟ್ರೋಲ್ ಪಂಪ್ ಸಿಬ್ಬಂದಿಗಳಿಗೆ ತಾವು ಮೋಸ ಹೋಗಿದ್ದು ಅರಿವಾದಾಗ ತಡವಾಗಿತ್ತು. ಅಷ್ಟರಲ್ಲಿ ಬೈಕ್ ಸವಾರ ಪರಾರಿಯಾಗಿದ್ದ. ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.
ಈ ಘಟನೆ ನಡೆದಿದ್ದು ಸುಳ್ಯದ ಜಾಲ್ಸೂರಿನಲ್ಲಿ. ರಾತ್ರಿ ಹೊತ್ತಿಗೆ ಆಗಮಿಸಿದ ಬೈಕ್ ಸವಾರ ತನ್ನ ಬೈಕಿಗೆ 210 ರೂ.ನ ಪೆಟ್ರೋಲ್ ಹಾಕಿಸಿದ್ದಾನೆ. ಹಣ ನೀಡುವ ಸಂದರ್ಭದಲ್ಲಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದಾನೆ. ಅದರಂತೆ ಸಿಬ್ಬಂದಿಗಳು ಸ್ಕ್ಯಾನರ್ ನೀಡಿದ್ದಾರೆ. ಆ ವ್ಯಕ್ತಿ 10 ರೂ.ವನ್ನು ಪೇ ಮಾಡಿ, ಸಕ್ಸಸ್ ಸಂದೇಶವನ್ನು ಸಿಬ್ಬಂದಿಗಳಿಗೆ ತೋರಿಸಿದ್ದಾರೆ. ಆದರೆ ಅಲ್ಲಿ ನಮೂದಾಗಿದ್ದ ಹಣದ ಮೊತ್ತವನ್ನು ಮಾತ್ರ ನೋಡಿಲ್ಲ.
ಹಣ ಬಂದಿರಬಹುದೆಂದು ಭಾವಿಸಿದ್ದ ಸಿಬ್ಬಂದಿಗಳು ಕಚೇರಿ ಒಳಗಡೆ ಹೋಗಿ ನೋಡಿದಾಗ ದಿಗ್ಬ್ರಾಂತರಾಗಿದ್ದರು. ಗೂಗಲ್ ಪೇ ಸ್ಪೀಕರ್ ಕಚೇರಿ ಒಳಗಡೆ ಇದ್ದುದರಿಂದ, ಸಿಬ್ಬಂದಿಗಳಿಗೆ ತಾವು ಮೋಸ ಹೋದದ್ದು ಅರಿವಾದಾಗ ತಡವಾಗಿತ್ತು.