ಏಳು ಮಕ್ಕಳಿದ್ದೂ ಅನಾಥಾಶ್ರಮ ಸೇರಿದ ವೃದ್ಧೆ ಸಾವು | ಅಂತ್ಯ ಸಂಸ್ಕಾರಕ್ಕೂ ಬಾರದ ಮಕ್ಕಳು!! | ಮಕ್ಕಳ ಸ್ಥಾನದಲ್ಲಿ ನಿಂತು ಆರೋಗ್ಯ ವಿಚಾರಿಸುತ್ತಿದ್ದ ಎಸ್.ಐ. ನಂದಕುಮಾರ್!

ಉಪ್ಪಿನಂಗಡಿ: ವೃದ್ಧಾಪ್ಯದ ಹಿನ್ನಲೆಯಲ್ಲಿ ಮಕ್ಕಳಿಂದ ಅನಾಥಾಶ್ರಮ ಸೇರಿದ ವೃದ್ಧೆಯೊಬ್ಬರು ಹೃದಯಾಘಾತದಿಂದ ಭಾನುವಾರ ನಿಧನರಾದರು.

90ರ ವಯಸ್ಸಿನ ವೃದ್ಧೆ ಲಕ್ಷ್ಮೀ ಹೆಗ್ಡೆ ನಿಧನರಾದವರರು.

ದುರಾದೃಷ್ಟ ಎಂದರೆ ಅವರಿಗೆ 7 ಮಕ್ಕಳಿದ್ದರೂ ಯಾರೂ ಪಾರ್ಥಿವ ಶರೀರದ ಅಂತಿಮ ಕಾರ್ಯಕ್ಕೆ ಆಗಮಿಸದ ಕಾರಣ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆಯೂ ನಡೆಯಿತು.



































 
 

ಉಪ್ಪಿನಂಗಡಿ ಸಮೀಪದ ಇಳಂತಿಲದಲ್ಲಿ ಲಕ್ಷ್ಮೀ ಹೆಗ್ಡೆ ಸ್ವಂತ ಮನೆಯನ್ನು ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಅವರು ನ್ಯಾಯ ಬಯಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ಹೆತ್ತಮ್ಮನ ರಕ್ಷಣೆಯ ಕರ್ತವ್ಯ ನಿರ್ವಹಿಸಿ ಎಂದು ಮಕ್ಕಳಿಗೆ ಸೂಚಿಸಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು. ಆ ಬಳಿಕ ಆಗಿನ ಠಾಣಾಧಿಕಾರಿ ನಂದ ಕುಮಾರ್ ಲಕ್ಷ್ಮೀ ಹೆಗ್ಡೆ ಅವರನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರಲ್ಲದೇ ಮಗನ ಸ್ಥಾನದಲ್ಲಿ ನಿಂತು ಆಶ್ರಮಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.

ಲಕ್ಷ್ಮೀ ಹೆಗ್ಡೆ ರವಿವಾರ ಹೃದಯಾಘಾತದಿಂದ ನಿಧನ ಹೊಂದಿದ ಬಳಿಕ ಶವದ ಅಂತಿಮ ವಿಧಿ ನೆರವೇರಿಸಲು ಸಂಬಂಧಿಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ದೊರೆಯಲಿಲ್ಲ. ಆಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರ್ತವ್ಯದ ಕಾರಣಕ್ಕೆ ದೂರದಲ್ಲಿ ಇದ್ದ ಕಾರಣ ಸಕಾಲದಲ್ಲಿ ತಲುಪಲು ಅಸಾಧ್ಯವಾಗಿತ್ತು. ಹೀಗಾಗಿ ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top