ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಭಾನುವಾರ ನಡೆಯಿತು.
ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು, ದ.ಕ. ಗೌಡ ಸಮಾಜ ಇಡೀ ಸಮುದಾಯ, ರಾಜ್ಯ ಒಂದು ಅದ್ಭುತ ಕಾರ್ಯಕ್ರಮ ಸಂಘಟನೆ ಮಾಡುತ್ತಿದೆ. ವಿಶೇಷವಾಗಿ ದ.ಕ., ಕೊಡಗು ಗೌಡ ಸಮಾಜ ಇಡೀ ಸಮುದಾಯ ರಾಜ್ಯಕ್ಕೆ, ದೇಶಕ್ಕೆ ಅಭೂತಪೂರ್ವ ಸಂಸ್ಕೃತಿ, ಸಂಸ್ಕಾರ ಕೊಟ್ಟಿದೆ. ಸಮುದಾಯದ ವ್ಯವಸ್ಥೆಗಳು, ನಡವಳಿಕೆಗಳು, ಆಚಾರ, ವಿಚಾರಗಳು ಅದ್ಭುತ. ಸಮುದಾಯ ಪವರ್ ಫುಲ್ ಸಂಘ ರಾಜ್ಯದ್ದು. ಇದು ಎಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಾಜದ ಒಂದೆಡೆ ಸೇರಬೇಕಾಗಿದೆ ಎಂದ ಅವರು, ಸಮಾಜದ ಆಧಾರ ಸ್ತಂಭ ಸಂಸ್ಕೃತಿ, ಸಂಸ್ಕಾರ, ಪ್ರೀತಿ ವಿಶ್ವಾಸ. ಇದರಲ್ಲಿ ಯಾವುದಾದರು ಒಂದು ಕೊರತೆಯಾದರೂ ಕೂಡಾ ಸಮಾಜ, ಸಮುದಾಯದಲ್ಲಿ ಅವ್ಯವಸ್ಥೆಯಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಕಾರ ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದ ಅವರು, ಸಮುದಾಯ ವಿದ್ಯಾಕ್ಷೇತ್ರದಲ್ಲಿ ಮುಂದೆ ಬಂದು ನಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದಾಗ, ಎಲ್ಲಾ ಏರುಪೇರುಗಳನ್ನು ಸಮನಾಗಿ ತೆಗೆದುಕೊಂಡು ಹೋದಾಗ ಯಶಸ್ವಿಯಾಗಲು ಸಾಧ್ಯ. ಸಂಸ್ಕಾರ, ಸಂಸ್ಕೃತಿ ಉಳಿಯಬೇಕು, ಪ್ರೀತಿ ವಿಶ್ವಾಸ ಜಾಸ್ತಿಯಾಗಬೇಕಾದರೆ ಕುಟುಂಬ ಕುಟುಂಬಗಳು ಒಂದಾಗಬೇಕು. ಇದಕ್ಕೆ ದ.ಕ., ಕೊಡಗು ಸಮಾಜ ವೇದಿಕೆ ಸೃಷ್ಟಿ ಮಾಡಲು ಬಲ್ಲ ಎಂದರು.
ಕೊಡಗು, ದ.ಕ. ಗೌಡ ಸಮಾಯದ ಅಧ್ಯಕ್ಷ ಪಳಂಗಪ್ಪ ಪಾಣತ್ತಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರ.ದ.ಕಾಲೇಜು ಪ್ರಾಚಾರ್ಯ ದಾಮೋದರ ಕಣಜಾಲು, ಶಿವಮೊಗ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತ ಸುಮಿತ ನಿಂಗರಾಜು ನಂಗಾರು, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ಹಾಗೂ ವಾಣಿಜ್ಯ ತೆರಿಗೆ ಸದಸ್ಯೆ ಕೆ.ಎಂ.ಸುಲೋಚನ ಧನಂಜಯ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ರಂಗ ಕಲಾವಿದ ವಿನೋದ್ ಮೂಡಗದ್ದೆ, ಪತ್ರಕರ್ತೆ ಶ್ರೀದೇವಿ ಅಂಬೆಕಲ್ಲು, ಕ್ರೀಡಾ ಸಾಧಕ ಋಷಿ ಭೂಪಣ್ಣ, ಹಿಮಾಂಶು ಕೊಲ್ಚಾರು, ರಿಷಿಕಾ ಬೆಳ್ಳಿಯಪ್ಪ ಸೇರಿದಂತೆ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು.