ಸುಳ್ಯ: ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ರಾಮಮಂದಿರ ಕುರಿತು ಹಾಕಿರುವ ಬ್ಯಾನರ್ ಒಂದನ್ನು ಹರಿದ ಪ್ರಕರಣ ಸುಳ್ಯದಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕ ಮಾಲಕರು ಸುಳ್ಯ ಜಾತ್ರೋತ್ಸವ, ಅಯೋಧ್ಯೆ ರಾಮ ಮಂದಿರ ಮತ್ತು ಬೆಳ್ಳಿ ಹಬ್ಬ ಸಂಭ್ರಮದ ಶುಭಕೋರುವ ಬ್ಯಾನರ್ ಕೆಲ ದಿನಗಳ ಹಿಂದೆ ಅಳವಡಿಸಲಾಗಿತ್ತು ಆದರೆ ಇಂದು ಮುಂಜಾನೆ ನೋಡಿದಾಗ ಬ್ಯಾನರ್ ನಲ್ಲಿ ರಾಮ ಮಂದಿರದ ಚಿತ್ರವಿರುವ ಸ್ಥಳವನ್ನು ಮಾತ್ರ ಹರಿದು ಹಾಕಲಾಗಿದೆ.
ವಿಷಯ ತಿಳಿದು ಸುಳ್ಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ಇದೀಗ ಹರಿದ ಬ್ಯಾನರ್ ತೆರವುಗೊಳಿಸಲಾಗುತ್ತಿದೆ. ಈ ಕುರಿತು ದೂರು ನೀಡಲು ತೀರ್ಮಾನಿಸುರುವುದಾಗಿ ಅಟೋ ಚಾಲಕರ ಸಂಘದ ಅಧ್ಯಕ್ಷ ರಾಧಕೃಷ್ಣ ಬೈತಡ್ಕ ತಿಳಿಸಿದ್ದಾರೆ.