ಪುತ್ತೂರು: ಬಿಜೆಪಿ ರಾಜ್ಯ ಮಾಧ್ಯಮ ವಿಭಾಗದ ಸಹಸಂಚಾಲಕರಾಗಿ ಪ್ರಶಾಂತ್ ಕೆಡೆಂಜಿ ಅವರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದಾರೆ.
ಸವಣೂರು ಗ್ರಾಮದ ಕೆಡೆಂಜಿ ಗಂಗಾಧರ ಗೌಡರ ಪುತ್ರರಾಗಿರುವ ಪ್ರಶಾಂತ್ ಕೆಡೆಂಜಿ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಹಾಗೂ ಬಿ.ಇ. ಇನ್ ಜರ್ನಲಿಸಮ್ ಮಾಡಿರುತ್ತಾರೆ. ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ್ದು, ಪ್ರಸ್ತುತ ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾಗಿದ್ದಾರೆ.
ಬಾಲ್ಯದಿಂದಲೇ ಸ್ವಯಂ ಸೇವಾ ಪ್ರಾಥಮಿಕ ಶಿಕ್ಷಣ ಪಡೆದಿರುವ ಅವರು, ಸರಹದ್ ಕೊ ಪ್ರಣಾಮ್ ಕುರಿತು ರಾಜಸ್ತಾನದ ಗಡಿಯಲ್ಲಿ ನಡೆದ ಅಭಿಯಾನದಲ್ಲಿ ಭಾಗಿಯಾಗಿದ್ದರು. 2011 ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಮತ್ತು ಕಾಲೇಜು ಅಧ್ಯಕ್ಷರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಬೆಂಗಳೂರು ಉತ್ತರ ಜಿಲ್ಲಾ ಸಹಸಂಚಾಲಕರಾಗಿ 2012 ರಿಂದ 2013 ರ ತನಕ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ವಿಸ್ತಾರಕನಾಗಿ, 2013 ರಲ್ಲಿ ಸ್ವಾಮಿ ವಿವೇಕಾನಂದರ 150ನೇ ವರ್ಷದ ಅಂಗವಾಗಿ ಪೂರ್ಣಾವಧಿ ಕಾರ್ಯಕರ್ತನಾಗಿ, ಬೆಂಗಳೂರು ನಗರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಸಂಘಟನಾ ಕಾರ್ಯದರ್ಶಿಯಾಗಿ, 2016-18 ಬೆಂಗಳೂರು ಉತ್ತರ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ, 2018-20 ರ ತನಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಗ್ರಾಮಾಂತರ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಪರಿಷತ್ ಸದಸ್ಯರಾಗಿ, ಎಬಿವಿಪಿಯಿಂದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ನಡೆದ ಸೃಷ್ಟಿ 2016 ಕಾರ್ಯಕ್ರಮದ ಸಂಯೋಜಕರಾಗಿ, ಸಾಮಾಜಿಕ ದರ್ಶನ -2017 ಕಾರ್ಯಕ್ರಮದ ಬೆಂಗಳೂರು ಸಂಚಾಲಕನಾಗಿ, ಹಾಸ್ಟೆಲ್ಗಳು ಜ್ಞಾನದ ಸೌಧಗಳಾಗಲಿ ಅಭಿಯಾನ ಕಾರ್ಯಕ್ರಮದ ಸಂಯೋಜಕರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ 6 ರಾಷ್ಟ್ರೀಯ ಅಧಿವೇಶನದಲ್ಲಿ ಭಾಗಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಮಾಧ್ಯಮ ಸಂಯೋಜಕರಾಗಿ, ಜಿಲ್ಲಾ ಸಂಚಾಲಕರು ಹಾಗೂ ವಕ್ತಾರರಿಗೆ ನಡೆದ ಮಾಧ್ಯಮ ಮಂಥನ ಕಾರ್ಯಕ್ರಮದ ಸಂಯೋಜಕರಾಗಿ, ರಾಷ್ಟ್ರೀಯ, ರಾಜ್ಯ ನಾಯಕರ ಪತ್ರಿಕಾಗೋಷ್ಠಿ ಹಾಗೂ ಪ್ರತಿಕಾ ಹೇಳಿಕೆ ಮಾಧ್ಯಮ ಸಂಯೋಜಕರಾಗಿ, ವಿಧಾನಸಭಾ ಚುನಾವಣೆ ಸಂದರ್ಭ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವರು, ಪ್ರಮುಖ ನಾಯಕರ ಪ್ರವಾಸ ಸಂದರ್ಭದಲ್ಲಿ ನ್ಯಾಷನಲ್ ಸುದ್ದಿವಾಹಿನಿ, ರಾಜ್ಯದ ಪ್ರಮುಖ ಸುದ್ಧಿವಾಹಿನಿಗಳ ಸಂದರ್ಶನದ ಸಂಯೋಜಕರಾಗಿ, 2023 ರ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿ ಹಾಗೂ ಸಮಾವೇಶಕ್ಕೆ ಸಂಬಂಧಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.