ಮನೆಗಳಲ್ಲಿ ಸತ್ತವರ ಲೆಕ್ಕ ಸಿಕ್ಕಿಲ್ಲ
ಬೀಜಿಂಗ್: ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಗತಿಯ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡದೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಚೀನದ ಕರಾಳ ಪರಿಸ್ಥಿತಿ ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಚೀನದಲ್ಲಿ ಮಾರಕ ಸೋಂಕಿಗೆ ಸುಮಾರು 60 ಸಾವಿರ ಮಂದಿ ಬಲಿಯಾಗಿರುವುದು ಈಗ ಬೆಳಕಿಗೆ ಬಂದಿದೆ.
ಈ ಎಲ್ಲ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಇದಲ್ಲದೆ ಕೋವಿಡ್ನಿಂದ ಇನ್ನೂ ಹೆಚ್ಚಿನ ಜನ ಮನೆಯಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖಯೆ ಇನ್ನಷ್ಟು ಹೆಚ್ಚು ಇರಬಹುದು ಎನ್ನಲಾಗುತ್ತಿದೆ.
ಪ್ರಸ್ತುತ ದೇಶವನ್ನು ವ್ಯಾಪಿಸುತ್ತಿರುವ ಕೋವಿಡ್ ಸೋಂಕಿನಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯನ್ನು ಚೀನಾ ಸರಿಯಾಗಿ ವರದಿ ಮಾಡುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗಷ್ಟೇ ಹೇಳಿತ್ತು.