ಮೋದಿ ಆಡಳಿತದಿಂದ ದೇಶದಲ್ಲಿ ಪರಿವರ್ತನೆ | ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಸಂಸದ ನಳಿನ್ ಕುಮಾರ್ ಕಟೀಲ್ | ವೀರಮಂಗಲ ಶಾಲೆಗೆ ಗರಿಷ್ಠ ಅನುದಾನ ಒದಗಿಸಿದ ತೃಪ್ತಿ ನನಗಿದೆ : ಸಂಜೀವ ಮಠಂದೂರು

ಪುತ್ತೂರು: ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇಶ ಬಹಳಷ್ಟು ಕ್ಷೇತ್ರಗಳಲ್ಲಿ ಪ್ರಗತಿ ಕಂಡಿದೆ. ಈ ಮೂಲಕ  ಪರಿವರ್ತನೆಯ ಯುಗ ಆರಂಭವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರಮಂಗಲ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈ ಶಾಲೆಯನ್ನು ಪಿಎಂಶ್ರೀಗೆ ಆಯ್ಕೆ ಮಾಡಿದ ಪುತ್ತೂರಿನ ನಿಕಟಪೂರ್ವ ಶಾಸಕ ಸಂಜೀವ ಮಠಂದೂರುರವರ ಕಾರ್ಯಕ್ಷಮತೆ ಪ್ರಶಂಸನೀಯ ಎಂದರು. ಪಿಎಂಶ್ರೀಗೆ ಆಯ್ಕೆಯಾದ ವೀರಮಂಗಲ ಶಾಲೆಗೆ ಮುಂದಿನ 5 ವರ್ಷ ಕೇಂದ್ರ ಸರಕಾರದಿಂದ ಅನೇಕ ಸೌಲಭ್ಯಗಳು ದೊರೆಯಲಿದೆ ಎಂದು ಹೇಳಿದ ಅವರು, ಶಾಲೆಯ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಅತ್ಯುತ್ತಮ ಕ್ರಿಯಾಶೀಲ ಚಟುವಟಿಕೆಯ ಶಿಕ್ಷಕರಾಗಿ ಸಮಾಜದಲ್ಲಿ ಉನ್ನತವಾದ ಗೌರವವನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



































 
 

ಈ ಸಂದರ್ಭದಲ್ಲಿ ವೀರಮಂಗಲ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಯ ಕೊರತೆ ಇರುವುದನ್ನು ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸಂಸದ ನಳಿನ್ ಕುಮಾ‌ರ್ ಕಟೀಲ್‌ರವರ ಗಮನಕ್ಕೆ ತಂದರು. ಎನ್‌ಎಂಪಿಟಿ ಮತ್ತು ಎಂಆರ್‌ಪಿಎಲ್‌ಗಳ ಸಹಕಾರದಿಂದ ಕೊಠಡಿಯನ್ನು ಒದಗಿಸಿಕೊಡುವುದಾಗಿ ಸಂಸದ ಕಟೀಲ್ ಭರವಸೆ ನೀಡಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವೀರಮಂಗಲ ಶಾಲೆಯ ಅಭಿವೃದ್ಧಿಗೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಗರಿಷ್ಟ ಮಟ್ಟದ ಅನುದಾನವನ್ನು ನೀಡಿದ್ದೇನೆ ಎಂಬ ಸಂತೃಪ್ತ ಭಾವನೆ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್, ಸದಸ್ಯರುಗಳಾದ ಸುಧಾಕ‌ರ್, ಪದ್ಮಾವತಿ, ವಸಂತಿ, ಪಿಎಂ ಪೋಷಣ್‌ ಸಹಾಯಕ ನಿರ್ದೆಶಕ ವಿಷ್ಣುಪ್ರಸಾದ್‌ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ,, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಆನಾಜೆ, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಿತೇಶ್ ಕುಮಾ‌ರ್ ಶಾಂತಿವನ, ಪ್ರವೀಣ್‌ ಸೇರಾಜೆ ಮತ್ತಿತರರು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕಿಯರಾದ ಶಿಲ್ಪರಾಣಿ, ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೋಭಾ ವಂದಿಸಿದರು.

ಕಾರ್ಯಕ್ರಮದಲ್ಲಿ  ನಿತ್ಯ ಚಪಾತಿ, ಇತರ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ, ಮೆಟ್ರಿಕ್ ಮೇಳ, ಕನ್ನಡ ಸಾಹಿತ್ಯ ಸಂಭ್ರಮ ಸೌಟ್ಸ್ ಮತ್ತು ಗೈಡ್ಸ್ ಹಾಗೂ ಸೇವಾ ದಳದ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ರಝಾಕ್, ಸದಸ್ಯರುಗಳಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ, ಲಿಂಗಪ್ಪ ಗೌಡ, ಪದ್ಮಾವತಿ, ಸುರೇಶ್, ಹಮೀದ್, ಸಮೀ‌ರ್, ರಾಜೇಶ್ವರಿ, ಪುಷ್ಪಾ, ಶಾಂಭಲತ, ಚಿತ್ರಾ, ರತ್ನಾವತಿ, ಚಿತ್ರಾ, ಭವ್ಯ, ಉಮ್ಮರ್, ಶಿಕ್ಷಕರಾದ ಹರಿಣಾಕ್ಷಿ, ಹೇಮಾವತಿ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ನಳಿನಿ, ಚಂದ್ರಾವತಿ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top