ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ಘಟಕಗಳು, ಎನ್ ಸಿ ಸಿ ಆರ್ಮಿ ಮತ್ತು ನೇವಿ ಘಟಕಗಳು, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಐಕ್ಯುಎಸಿ ಇವುಗಳ ಸಹಯೋಗದೊಂದಿಗೆ ಕಾಲೇಜಿನ ಬೆಳ್ಳಿ ಹಬ್ಬಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವ ಮಾನವತೆಯ ಸಂದೇಶ ನೀಡಿದ ಸಂತ ಅವರ ವಿಚಾರಧಾರೆಯು ನಮಗೆ ಸ್ಪೂರ್ತಿ”ಯುವ ಸಬಲೀಕರಣವಾದರೆ ದೇಶಕ್ಕೆ ಒಳಿತಾಗುವುದು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ, ಯುವಕರೆಂದರೆ ಅಪರಿಮಿತ ಸಾಟಿಯಿಲ್ಲದ ಉತ್ಸಾಹಕ್ಕೆ ಇನ್ನೊಂದು ಹೆಸರು. ಯುವ ಶಕ್ತಿಯು ಅತ್ಯಂತ ಪ್ರಭಾವಶಾಲಿ ಶಕ್ತಿಯಾಗಿದೆ. ಯುವ ಜನತೆ ದೇಶದ ಒಳಿತಿಗಾಗಿ ಒಗ್ಗೂಡಬೇಕು. ಸ್ವಾಮಿ ವಿವೇಕಾನಂದರು ದೇಶವನ್ನು ಅಪರಿಮಿತವಾಗಿ ಪ್ರೀತಿಸಿದರು. ತಾಯ್ನೆಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವವೇ ಗುರುತಿಸುವಂತೆ ಮಾಡಿದರು, ಈ ಕಾರಣದಿಂದಾಗಿ ಅವರ ವಿಚಾರಧಾರೆಯು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಈ ಸಂರ್ದಭದಲ್ಲಿ ಎನ್ ಸಿ ಸಿ ಆರ್ಮಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೆರಾ ಹಾಗೂ ರೋವರ್ಸ್ ರೇಂಜರ್ಸ್ ಸೋಯೋಜಕ ಧನ್ಯ ಪಿ ಟಿ ವೇದಿಕೆಯಲ್ಲಿ ಉಸ್ಥಿತರಿದ್ದರು.ಹಿತಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿ ಪುಷ್ಪ ಎನ್ ಸ್ವಾಗತಿಸಿದರು. ಎನ್ ಸಿ ಸಿ ನೇವಿ ಅಧಿಕಾರಿ ತೇಜಸ್ವಿ ಭಟ್ ವಂದಿಸಿದರು, ವಿದ್ಯಾರ್ಥಿನಿ ನೂತನ ಕಾರ್ಯಕ್ರಮ ನಿರೂಪಿಸಿದರು