ಕಡಬ: ಡಿ.26 ರಂದು ಕಡಬ ತಾಲೂಕಿನ ಹೊಸಮಠದಲ್ಲಿ ನಡೆಯುವ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿ ಸಭೆ ಶುಕ್ರವಾರ ಸಂಜೆ ಕಡಬದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಕಾರ್ಯದರ್ಶಿ ಪ್ರಶಾಂತ್ ಗೌಡ ಪಂಜೋಡಿ, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಮೇಶ್ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಹೇಮಂತ್ ಮಂಡೆಕರ, ಯುವ ಸಂಘದ ಅಧ್ಯಕ್ಷ ಪೂರ್ಣೇಶ್ ಬಲ್ಯ, ಕಾರ್ಯದರ್ಶಿ ಸುಧೀಶ್ ಪಟ್ಟೆ, ಉಪಾಧ್ಯಕ್ಷ ತಮ್ಮಯ್ಯ ಗೌಡ, ಖಜಾಂಚಿ ಶಿವಪ್ರಸಾದ್ ಬಲ್ಯ ಉಪಸ್ಥಿತರಿದ್ದರು.
ಸಂಘದ ಸಂಘಟನಾ ಕಾರ್ಯದರ್ಶಿ ಶಿವರಾಮ್ ಗೌಡ ಏನೆಕಲ್ಲು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ವಾಡ್ಯಪ್ಪ ಗೌಡ ಎರ್ಮಾಯಿಲ್, ಆಹಾರ ಸಮಿತಿ ಸಂಚಾಲಕ ಶಶಿ ಬೈಲು, ಪಾರ್ಕಿಂಗ್ ಸಮಿತಿ ಸಂಚಾಲಕ ದಿವಾಕರ ಗೌಡ ಎರ್ಮಾಳ, ಸ್ವಾಗತ ಸಮಿತಿ ಸಂಚಾಲಕ ಜನಾರ್ದನ ಗೌಡ ಪಣೆಮಜಲು ಹಾಗೂ ಇನ್ನಿತರ ಸಮಿತಿ ಪದಾಧಿಕಾರಿಗಳು ತಮ್ಮ ತಮ್ಮ ಸಮಿತಿಯ ಜವಾಬ್ದಾರಿ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಗ್ರಾಮದ ಹೊರಕಾಣಿಕೆ ವಾಹನಗಳು ಡಿ.25 ರಂದು ಸಂಜೆ 3 ಗಂಟೆಗೆ ಕಡಬ ಶ್ರೀ ಗಣಪತಿ ದೇವಸ್ಥಾನಕ್ಕೆ ಬಂದು ಅಲ್ಲಿಂದ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆ ಉದ್ಘಾಟನೆಗೊಂಡು ಚೆಂಡೆ, ವಾದ್ಯದೊಂದಿಗೆ ಶಿಲಾನ್ಯಾಸ ನಡೆಯುವ ಹೊಸಮಠವನ್ನು ಸಂಜೆ 4 ಕ್ಕೆ ತಲುಪುವುದು.
ಸಭೆಯಲ್ಲಿ ಸುಮಾರು 200 ಕ್ಕೂ ಮಿಕ್ಕಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.