ಪುತ್ತೂರು: ವಿದ್ಯಾಮಾತ ಅಕಾಡೆಮಿ ರಾಜ್ಯದಲ್ಲೇ ಪ್ರಪಥಮ ಬಾರಿಗೆ ಆಯೋಜಿಸಿದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ನಗದು ಬಹುಮಾನವಾದ ಐವತ್ತು ಸಾವಿರ ರೂ.ವನ್ನು ಬೆಳ್ಳಾರೆ ಪೋಲಿಸ್ ಠಾಣೆಯ ಕಾನ್ಸ್ಟೇಬಲ್ ಬಸವರಾಜ್ ಹಾಗೂ ದ್ವಿತೀಯ ಬಹುಮಾನ ನಗದು ಇಪ್ಪತ್ತೈದು ಸಾವಿರ ರೂ.ಯನ್ನು ಬೆಳ್ಳಾರೆ ಠಾಣೆಯ ಕಾನ್ಸ್ಟೇಬಲ್ ಹಾಲೇಶ್ ಅವರು ಪಡೆದುಕೊಂಡಿದ್ದಾರೆ.
ಪೋಲಿಸ್ ಸಬ್ ಇನ್ಸ್ ಪೆಕ್ಟರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನ್ನಿತರ ಹಲವು ಸ್ಪರ್ದಾತ್ಮಕ ಪರೀಕ್ಷೆಯ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡುವ ಸಲುವಾಗಿ ಸ್ಪರ್ದಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ ಘೋಷಿಸಿತ್ತು. ಪರೀಕ್ಷಗೆ ಸುಮಾರು ಒಂದು ಸಾವಿರ ಅಭ್ಯರ್ಥಿ ಗಳು ಭಾಗವಹಿಸಿದ್ದು, ಅದರ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇವರಿಬ್ಬರೂ ಕೂಡ ಮುಂದೆ ನಡೆಯುವ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯನ್ನು ಬರೆಯಲಿದ್ದಾರೆ.
ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ನಗದು ಬಹುಮಾನವನ್ನು ಪಡೆದ ಮೊತ್ತದಲ್ಲಿ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ಬಸವರಾಜ್ ಹತ್ತು ಸಾವಿರ ಹಾಗೂ ಹಾಲೇಶ್ ಐದು ಸಾವಿರ ರೂ.ವನ್ನು ಬಡಮಕ್ಕಳ ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ನೀಡಿ ಪ್ರೋತ್ಸಾಹಿಸಿ ಮಾನವೀಯತೆಗೆ ಸಾಕ್ಷಿಯಾದರು.
ಪುತ್ತೂರು ಅಬಕಾರಿ ಡಿವೈಎಸ್ಪಿ ಅಶೋಕ್ ಪೂಜಾರಿ , ಪುತ್ತೂರು ನಗರ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ವಿದ್ಯಾಮಾತ ಅಕಾಡೆಮಿ ಅಧ್ಯಕ್ಷ ಭಾಗೇಶ್ ರೈ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು.