ಹೊಸದಿಲ್ಲಿ: ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಮೊತ್ತ ಬಿಡುಗಡೆಗೊಂಡಿದ್ದು, ಲಕ್ಷಕ್ಕಿಂತಲೂ ಅಧಿಕ ಮೊತ್ತ ರೈತರ ಖಾತೆಗೆ ಜಮೆಯಾಗುತ್ತಿದೆ. ಪರಿಣಾಮ ರೈತ ವರ್ಗದಲ್ಲಿ ಸಂತಸ ಉಂಟು ಮಾಡಿದೆ.
2016 ರಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜ್ಯಾರಿಗೊಳಿಸಿದ್ದು, ರೈತರಿಗೆ ವರದಾನವಾಗಿ ಪರಿಣಮಿಸಿದೆ. ಈ ಯೋಜನೆಯಡಿ ಸರಕಾರದ ರೈತರ ಬೆಳೆಗಳಿಗೆ ವಿಮೆ ಲಾಭವನ್ನು ನೀಡುತ್ತದೆ. ಪ್ರಾಕೃತಿಕ ವಿಕೋಪದಿಂದ ರೈತನ ಬೆಳೆ ನಾಶವಾದರೆ ರೈತನಿಗೆ ಪರಿಹಾರ ನೀಡುವ ಯೋಜನೆಯಾಗಿದೆ. ಸಂಕಷ್ಟ ಸಮಯದಲ್ಲೂ ರೈತರು ಈ ಯೋಜನೆ ಮೂಲಕ ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ.
ಈ ಯೋಜನೆಯ ಆರಂಭಗೊಂಡ ಬಳಿಕ ಪ್ರತಿ ವರ್ಷ ರೈತರ ಖಾತೆಗೆ ನೇರ ಜಮೆಯಾಗುತ್ತಿತ್ತು. ಇದೀಗ ಈ ಬಾರಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಮೊತ್ತ ರೈತರ ಖಾತೆಗೆ ಲಕ್ಷಕ್ಕಿಂತಲೂ ಅಧಿಕ ಜಮೆಯಾಗುತ್ತಿದ್ದು, ಪರಿಣಾಮ ದೇಶದ ಬೆನ್ನೆಲುಬಾದ ರೈತ ಫುಲ್ ಖುಷಿಯಾಗಿದ್ದಾನೆ.