ಪುತ್ತೂರು: ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 13ರಂದು ಧನುಪೂಜೆ, ಹೋಮ ಕಲಶಾಭಿಷೇಕ ನಡೆಯಿತು.
ಬೆಳಿಗ್ಗೆ 5ಕ್ಕೆ ಧನುಪೂಜೆ, 6ರಿಂದ ಶ್ರೀ ಗಣಪತಿ ಹೋಮ ಅಂಕುರ ಪೂಜೆ , ಪ್ರಾಯಶ್ಚಿತ ಹೋಮ ನಡೆಯಿತು. ನಂತರ ಬೆಳಂದೂರು ವಿಷ್ಣು ಪ್ರಿಯ ಭಜನಾ ಮಂಡಳಿ. ಕಲ್ಲಮಾಡ ಶ್ರೀ ಉಳ್ಳಾಕುಲು ಯುವಕ ಮಂಡಲದಿಂದ ಭಜನೆ ಜರಗಿತು. ಮಧ್ಯಾಹ್ನ ಹೋಮ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಮಧ್ಯಾಹ್ನ 3ರಿಂದ ಕುದ್ಮಾರು ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ ಸಂಜೆ 4.30ರಿಂದ ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಭಜನೆ ನಡೆಯಲಿದೆ. ಸಂಜೆ 6ರಿಂದ ಕಾಯಿಮಣ ಅಂಗಣವಾಡಿ ಪುಟಾಣಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ 7ರಿಂದ ಶ್ರೀ ದುರ್ಗಾ ನಮಸ್ಕಾರ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6ರಿಂದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಣಿಲ ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಮಂಗಳೂರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8.30ರಿಂದ ಅಂತಾರಾಷ್ಟ್ರೀಯ ಯೋಗ ಪಟು ಪ್ರಣಮ್ಯ ಅಗಳಿ ಅವರಿಂದ ಯೋಗಾಸನ ಹಾಗೂ ರಾತ್ರಿ 9ರಿಂದ ಪುತ್ತೂರು ಶ್ರೀ ಗೋಪಾಲಕೃಷ್ಣ ಕೆಡೆಂಗ ನೇತೃತ್ವದ ಸೌಂಡ್ಸ್ ಮೆಲೋಡಿ ತಂಡದಿಂದ ಭಕ್ತಿರಸಮಂಜರಿ ನಡೆಯಲಿದೆ.