ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿದೆ. ಆದ್ರೆ ಇಂದು ಅದರ ಹಿಂದಿನಿ ಸತ್ಯ ತಿಳಿದು ಇದೀಗ ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಒಂದು ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿತ್ತು. ಆದ್ರೆ ಅದರ ಹಿಂದಿರುವ ಸತ್ಯ ಏನೆಂಬುದು ಆ ಕುಟುಂಬಕ್ಕೂ ಗೊತ್ತಿರಲಿಲ್ಲ. ಇತ್ತೀಚೆಗೆ ಅವುಗಳನ್ನು ಪರೀಕ್ಷಿಸಿದ ವಿಜ್ಞಾನಿಗಳು, ಅವು ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ಡೈನೋಸಾರ್ ಮೊಟ್ಟೆಗಳು ಎಂದು ಪತ್ತೆಹಚ್ಚಿದ್ದಾರೆ. ಇದನ್ನು ಕೇಳಿದ ಮನೆಯವರು ಬೆಚ್ಚಿಬಿದ್ದಿದ್ದಾರೆ. ಡೈನೋಸಾರ್ ಮೊಟ್ಟೆಗಳು ಇಲ್ಲಿ ಹೇಗೆ ಬಂದಿದೆ ಎಂಬುದರ ಹೊರತಾಗಿಯೂ, ಕುಟುಂಬ ಆ ಮೊಟ್ಟೆಗಳನ್ನು ಹಲವು ವರ್ಷಗಳಿಂದ ಸುರಕ್ಷಿತವಾಗಿ ಇಟ್ಟದ್ದೇ ವಿಶೇಷ ಎಂದು ಸಂಶೋಧಕರು ಹೇಳುತ್ತಾರೆ.
ಕಾಕರ ಭೈರವನ ಹೆಸರಲ್ಲಿ ಪೂಜಿಸುತ್ತಿದ್ದ ಕಲ್ಲು:
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಡ್ಲಾಯ ಗ್ರಾಮದ ಮಂಡೋಲೈ ಎಂಬ ಕುಟುಂಬ ಈ ಮೊಟ್ಟೆಗಳನ್ನು ತಮ್ಮ ಕುಲದೇವತೆಯ ಹೆಸರಿನಲ್ಲಿ ಪೂಜಿಸುತ್ತಿತ್ತು. ಇವುಗಳಲ್ಲಿ ಪ್ರತಿಯೊಂದೂ ಅಂಗೈ ಗಾತ್ರದ ದುಂಡಗಿನ ಕಲ್ಲಿನಂತಿದೆ. ಆ ಕಲ್ಲಿನಂತಿದ್ದ ಮೊಟ್ಟೆಗಳನ್ನು ಕಾಕರ ಭೈರವನ ಹೆಸರಿನಲ್ಲಿ ಪೂಜಿಸುತ್ತಿದ್ದೇವೆ ಎಂದು ಸದ್ಯ ಮನೆಯಲ್ಲಿ ವಾಸವಾಗಿರುವ ವೆಸ್ತಾ ಮಂಡೋಲೈ (41) ಮಾಧ್ಯಮಕ್ಕೆ ಹೇಳಿದ್ದಾರೆ. ಈ ದೇವತೆಯು ತಮ್ಮ ಹೊಲಗಳನ್ನು ಮತ್ತು ಜಾನುವಾರುಗಳನ್ನು ರಕ್ಷಿಸುತ್ತದೆ ಎಂದು ಅವರು ನಂಬುತ್ತಿದ್ದರಂತೆ.
ಫೋಟೋ ನೋಡಿ ಸಂಶೋಧನೆಗೆ ಮುಂದಾದ ವಿಜ್ಞಾನಿಗಳು:
ಇಷ್ಟೇ ಅಲ್ಲದೆ ಸುತ್ತಮುತ್ತಲಿನ ಕೆಲ ಕುಟುಂಬಗಳು ಸಹ ಕಾಕರ ಭೈರವನ ಹೆಸರಿನಲ್ಲಿ ಇಂತಹ ಮೊಟ್ಟೆಗಳನ್ನು ಪೂಜಿಸುತ್ತಿದ್ದರೆಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಈ ಮೊಟ್ಟೆಗಳನ್ನು ದೇವರು ಎಂದು ಪ್ರಚಾರ ಮಾಡುತ್ತಿದ್ದ ಫೋಟೋಗಳನ್ನು ನೋಡಿ ಅನುಮಾನಗೊಂಡ ವಿಜ್ಞಾನಿಗಳು ಅವುಗಳನ್ನು ಪರೀಕ್ಷಿಸಲು ನಿರ್ಧರಿಸಿದರು. ಲಕ್ನೋ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ವಿಭಾಗದ ಸಂಶೋಧಕರು ಈ ಸ್ಥಳಕ್ಕೆ ಭೇಟಿ ನೀಡಿದ್ದು, ದೇವತೆಗಳು ಎಂದು ಪೂಜಿಸುವ ಮೊಟ್ಟೆಯನ್ನು ಪತ್ತೆ ಮಾಡಿದ್ದಾರೆ.