ಪುತ್ತೂರು: ನಗರಸಭೆ ಉಪಚುನಾವಣೆ ಹಿನ್ನಲೆಯಲ್ಲಿ ವಾರ್ಡ್ 1 ನೆಲ್ಲಿಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಪರವಾಗಿ ಬಿಜೆಪಿಯಿಂದ ಮನೆ ಮನೆ ಭೇಟಿ ಮತಯಾಚನೆ ಆರಂಭಗೊಂಡಿದೆ.
ಪುಡಾ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಬೂತ್ ಅಧ್ಯಕ್ಷ ಗಣೇಶ್ ಕಾಮತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್. ಶೆಟ್ಟಿ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಮಮತಾ ರಂಜನ್, ಪೂರ್ಣಿಮಾ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಸತೀಶ್ ನ್ಯಾಕ್ ಪರ್ಲಡ್ಕ, ರೋಹಿತ್ ನೆಲ್ಲಿಕಟ್ಟೆ, ಆರ್ಯಾವು ಗ್ರಾ.ಪಂ ಅಧ್ಯಕ್ಷೆ ಗೀತಾ, ನೆಲ್ಲಿಕಟ್ಟೆ ನಿವಾಸಿಗಳಾದ ಗೌತಮ್, ಉಲ್ಲಾಸ್ ಪೈ, ಶೇಖರ್ ಬ್ರಹ್ಮನಗರ, ಅಶೋಕ್ ಬ್ರಹ್ಮನಗರ, ಮೋಹನ್ ಮಡಿವಾಳ, ಸಂಕೇತ್ ಸಹಿತ ಹಲವಾರು ಮಂದಿ ಮನೆಮನೆ ಮತಯಾಚನೆಯಲ್ಲಿ ಭಾಗವಹಿಸಿದ್ದರು.
ವಾರ್ಡ್ 11 ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರೋಹಿತ್ ನೆಲ್ಲಿಕಟ್ಟೆ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನೆಲ್ಲಿಕಟ್ಟೆ ವಾರ್ಡ್-11 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ರೋಹಿತ್ ಅವರು ಪಕ್ಷದ ಮುಖಂಡರಿಗೆ ಕೋರಿಕೆ ಸಲ್ಲಿಸಿದ್ದರು. ಆದರೆ ಅವರಿಕೆ ಅವಕಾಶ ದೊರೆಯದೆ ದಾಮೋದರ್ ಭಂಡಾರ್ಕರ್ ಅವರಿಗೆ ಪಕ್ಷ ಅವಕಾಶ ನೀಡಿದೆ. ಇದರಿಂದ ಅಸಮಾಧಾನಗೊಂಡು ರೋಹಿತ್ ಅವರು ಬಿಜೆಪಿ ಅಭ್ಯರ್ಥಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.