ಪುತ್ತೂರು: ಮಕ್ಕಳನ್ನು ತಿದ್ದುವ ಮತ್ತು ಉತ್ತಮ ದಾರಿ ತೋರಿಸುವ ಕೆಲಸ ಕೇವಲ ಶಿಕ್ಷಕರಿಂದ ಮಾತ್ರವಲ್ಲ ಪೋಷಕರಿಂದಲೂ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಬೆಳಿಯೂರು ಕಟ್ಟೆ ಸರಕಾರಿ ಪ ಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಶಿಸ್ತು ಕಡಿಮೆ ಎಂದು ಕೆಲವರು ಆಪಾದನೆ ಮಾಡುತ್ತಾರೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಸ್ತು ಪಾಲನೆ ಮಾಡಬೇಕಾದರೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ ಎಂದ ಅವರು, ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು. ದುಶ್ಚಟಗಳಿಗೆ ಯಾರೂ ಬಲಿಯಾಗಬಾರದು. ತಂದೆ ತಾಯಿಯ ಹೆಸರನ್ನು ಕೆಡಿಸುವ ಕರಲಸವನ್ನು ಎಂದೂ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ರಾಜ್ಯ ಭಾವೈಕ್ಯತಾ ಪರಿಷತ್ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ, ಜಗನ್ ಮೋಹನ್ ರೈ, ಇಂದಿರಾ ಎಸ್.ರೈ, ಅಬ್ದುಲ್ ಹಮೀದ್ ಸಾಜ, ರಾಮಚಂದ್ರ ರೈ, ಗಣೇಶ್ ಭಟ್, ಫೆಲಿಕ್ಸ್ ಮೊಂತೆರೋ ಪಾಲ್ಗೊಂಡಿದ್ದರು. ಬಲ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಮೇಶ್ವರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎ.ಎಂ.ಪ್ರಕಾಶ್ ಚಂದ್ರ ಆಳ್ವ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಬಿ.ಮಹಮ್ಮದ್ ಅಶ್ರಫ್, ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ, ಹಿರಿಯ ಪದವೀಧರ ಶಿಕ್ಷಕಿ ಸುನೀತ ಎಂ. ಉಪಸ್ಥಿತರಿದ್ದರು.