ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವೈಭವದ ಪಂಚಮಿ ಉತ್ಸವ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗತಂಬಿಲ ಸೇವೆಗಳು ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.
ರಾತ್ರಿ 7 ಗಂಟೆಯಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, 5 ರಿಂದ ಶಿರಾಡಿ ದೈವದ ಕಿರುವಾಳು ಆಗಮಿಸಿತು. ಬಳಿಕ ಮಂಗಳೂರು ಶ್ರೀ ಮುನೀಶ್ವರ ಮಹಾಗಣಪತಿ ವ್ಯಾಯಾಮ ಶಾಲೆ ವತಿಯಿಂದ ತಾಲೀಮು ಹಾಗೂ ಬೆಂಕಿ ಪ್ರದರ್ಶನಗೊಂಡಿತು.