ಬಂಟ್ವಾಳ: ತಾಲೂಕಿನ ಪೆರ್ನೆ. ಬಿಳಿಯೂರು ಗ್ರಾಮದ ಕಡಪು ಎಂಬಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ನಿರ್ಮಾಣವಾದ 51 ಕೋಟಿ ವೆಚ್ಚದ ಸಂಪರ್ಕ ರಸ್ತೆ ಮತ್ತು ಕಿಂಡಿ ಅಣೆಕಟ್ಟಿನಲ್ಲಿ ನದಿಗೆ ಬಾಗಿನ ಅರ್ಪಿಸುವ ಗಂಗಾ ಪೂಜೆ ಡಿ.17 ಭಾನುವಾರ ಬೆಳಿಗ್ಗೆ ನಡೆಯಿತು.
ಗೋಪಾಲಕೃಷ್ಣ ಭಟ್ ಅವರು ಪೂಜೆ ನೆರವೇರಿಸಿದರು.
ಬಾಗಿನ ಅರ್ಪಿಸಿ ಮಾತನಾಡಿದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ. 51 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟು, ಕುಡಿಯುವ ನೀರಿನ ಯೋಜನೆ, ಅಂತರ್ಜಲ ವೃದ್ಧಿ ಮತ್ತು ಬೆಳ್ತಂಗಡಿ ತಾಲೂಕನ್ನು ಸಂಪರ್ಕಿಸುವ ಸರ್ವಋತು ಸೇತುವೆ ಜನರ ಉಪಯೋಗಕ್ಕೆ ದೊರೆತಿದೆ. ಇದರ ಗೇಟು ಅಳವಡಿಕೆ ಪೂರ್ಣಗೊಂಡಿದ್ದು ಇಲ್ಲಿಂದ ಉಪ್ಪಿನಂಗಡಿವರೆಗೆ ಒಟ್ಟು ಎಂಟು ಕಿಲೋಮೀಟರ್ ನೀರು ಸಂಗ್ರಹಗೊಂಡು ನದಿಯ ಎರಡು ಬದಿಯ ರೈತರಿಗೆ ಕೃಷಿಗೆ ಬೇಕಾದಷ್ಟು ನೀರು ಸಿಗಲಿದೆ. ಇದು ರೈತರ ಪಾಲಿಗೆ ಸಂತಸವನ್ನುಂಟು ಮಾಡಿದೆ. ನೇತ್ರಾವತಿಯ ಒಡಲು ಭರ್ತಿಯಾಗಿ ಕಿಂಡಿ ಅಣೆಕಟ್ಟಿಗೆ ಪೂಜೆ ಮಾಡುವ ಮೂಲಕ ಬಾಗಿನ ಅರ್ಪಿಸಲಾಯಿತು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಜನಪರ, ರೈತ ಪರವಾಗಿರುವ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ ಹಿಂದಿನ ಬಿಜೆಪಿ ಸರಕಾರಕ್ಕೂ ಧನ್ಯವಾದ ಸಲ್ಲಿಸಿದ ಅವರು, ಈ ಭಾಗದ ಜನರಿಗೆ ನಾನು ಮತ್ತೊಮ್ಮೆ ಹೃದಯಂತರಾಳದಿಂದ ನಮಿಸುತ್ತೇನೆ. ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಕ್ಷೇತ್ರದ ಜನರ ಹಿತಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೆರ್ನೆ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್ ಪದಬರಿ, ಕೇಶವ ಸುನ್ನಾನ, ಜಯಂತಿ, ಸುಮತಿ, ಶಾರದಾ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ ಸಫಲ್ಯ ಬೆದ್ರ, ಸುದೀಪ್ ಕುಮಾರ್ ಪದಬರಿ, ಸುರೇಶ್ ಕುಲಾಲ್ ಕೋಡಿ, ಪ್ರಶಾಂತ್ ನೇಂಜ, ರಾಜೇಶ್ ಸಫಲ್ಯ ಬೇದ್ರ, ಮಹೇಶ್ ಪಡಿವಾಳ, ಜಯಕೀರ್ತಿ, ಸುರೇಶ್ ನೂಜೆ, ಅಶೋಕ, ಕೇಶವ, ಸೀತಾರಾಮ, ಲಕ್ಷ್ಮಣಗೌಡ ಬೆಳ್ಳಿಪ್ಪಾಡಿ, ಮುಕುಂದ ಬಜತ್ತೂರು, ಶೌಕತ್ತು ಆಲಿ, ಗೋಪಾಲಕೃಷ್ಣ ಭಟ್ ಕೆದಿಲ. ರಾಘವೇಂದ್ರ ಭಟ್, ಪದ್ಮನಾಭ ಭಟ್, ಉಮೇಶ್ ಮುರುವ, ಸದಾನಂದ ಮತ್ತಿತರರು ಉಪಸ್ಥಿತರಿದ್ದರು