ನವದೆಹಲಿ: ಬುಧವಾರ ಸಂಸತ್ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿಸಿದವರ ವಿರುದ್ದ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಯುಎಪಿಎ ಕಾಯ್ದೆ :
ಯುಎಪಿಎಯ ಸೆಕ್ಷನ್ 15 ಭಯೋತ್ಪಾದಕ ಚಟುವಟಿಕೆಯನ್ನು ವ್ಯಾಖ್ಯಾನಿಸುತ್ತದೆ. ಈ ಕಾನೂನಿನ ಅಡಿಯಲ್ಲಿ, ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯ ಅವಕಾಶವಿದೆ. ಭಯೋತ್ಪಾದಕ ಘಟನೆಯಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡರೆ, ತಪ್ಪಿತಸ್ಥರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಯಾವುದೇ ವ್ಯಕ್ತಿ ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ದೇಶದ ಸಮಗ್ರತೆ, ಏಕತೆ, ಭದ್ರತೆ ಮತ್ತು ಸಾರ್ವಭೌಮತ್ವವನ್ನು ನಾಶಮಾಡಲು ಪ್ರಯತ್ನಿಸಿದರೆ ಅಥವಾ ದೇಶ ಅಥವಾ ದೇಶದ ಹೊರಗಿನ ಭಾರತೀಯರೊಂದಿಗೆ ಭಯೋತ್ಪಾದಕ ಘಟನೆಯನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಆತ ಯುಎಪಿಎ ವ್ಯಾಪ್ತಿಗೆ ಬರುತ್ತಾನೆ. ಈ ಕಾಯ್ದೆನ್ನು 1967 ರಲ್ಲಿ ಜಾರಿಗೆ ತರಲಾಯಿತು.
ಇದೀಗ ಆರೋಪಿಗಳ ವಿರುದ್ಧ ಯುಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.