ಪುತ್ತೂರು: ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. 14ರಂದು ವರ್ಷಾವಧಿ ಉತ್ಸವ ನಡೆಯಲಿದೆ.
ಜ. 7ರಂದು ಗೊನೆ ಮುಹೂರ್ತ ನಡೆದಿದ್ದು, ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ನಡೆಯಲಿದೆ. ಬೆಳಿಗ್ಗೆ 8ರಿಂದ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಶ್ರೀ ಸತ್ಯನಾರಾಯನ ದೇವರ ಪೂಜೆ, ಶ್ರೀ ವನದುರ್ಗಾ ದೇವಿ ಮಹಾಪೂಜೆ, ಶ್ರೀ ಶಾಸ್ತಾವು ದೇವರ ಮಹಾಪೂಜೆ, ಗುರುಪೂಜೆ, ಉಳ್ಳಾಕುಲು ಮತ್ತು ಗುಳಿಗ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.
ಬೆಳಿಗ್ಗೆ 10ರಿಂದ ಪುತ್ತೂರು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡ ಮಹಿಳಾ ತಂಡ, ಬಡಗನ್ನೂರು ಪೆರಿಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5.30ಕ್ಕೆ ಬೈಲಾಡಿ ಮನೆಯಲ್ಲಿ ಕುಟುಂಬದ ಧರ್ಮದೈವಗಳ ತಂಬಿಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.