ಡಿ.12 : ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟದಿಂದ ಪ್ರತಿಭಟನೆ | ಸೇವೆಯಲ್ಲಿ ಉಂಟಾಗಲಿದೆ ವ್ಯತ್ಯಯ

ಮಂಗಳೂರು: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ  ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸಹಯೋಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 12ರಿಂದ ಮುಷ್ಕರ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮುಷ್ಕರ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಐಜಿಡಿಎಸ್‌ಯು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ ಸಭೆಯೊಂದರಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ 16.5 ಸಾವಿರ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಅಂಚೆ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಗ್ರಾಮೀಣ ಜನರಿಗೆ ತಲುಪಿಸುತ್ತಿದ್ದಾರೆ. ಈ ಮುಷ್ಕರ ದೇಶದಾದ್ಯಂತ ಏಕಕಾಲದಲ್ಲಿ ನಡೆಯಲಿದ್ದು, ದೇಶದಲ್ಲಿ ಶೇ. 80 ಅಂಚೆ ಕಚೇರಿಗಳು ಗ್ರಾಮೀಣ ಭಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. 3.16 ಲಕ್ಷ ಗ್ರಾಮೀಣ ಅಂಚೆ ಸೇವಕರು ಇದ್ದಾರೆ. 5 ಗಂಟೆಗಳ ಕರ್ತವ್ಯದ ಮಿತಿ ತೆಗೆದು ಹಾಕಿ, ಪ್ರತ್ಯೇಕ ವರ್ಗೀಕರಣ ನೀಡುವ ಮೂಲಕ ಪೌರಕಾರ್ಮಿಕರ ಸ್ಥಾನಮಾನ ಒದಗಿಸಬೇಕು. ಕಮಲೇಶ್ ಚಂದ್ರ ಸಮಿತಿಯ ಶಿಫಾರಸ್ಸಿನಂತೆ 12, 24 ಮತ್ತು 36 ವರ್ಷಗಳ ಸೇವೆ ಪೂರ್ಣಗೊಳಿಸಿದ ಬಳಿಕ ಮುಂಬಡ್ತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



































 
 

ಕಡಿಮೆ ಸಂಬಳ ಪಡೆಯುವ ಗ್ರಾಮೀಣ ಅಂಚೆ ಸೇವಾ ನೌಕರರಿಗೆ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್) ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಗ್ರಾಚುಟಿ ಸೇರಿ ವಿವಿಧ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top