ಅಯೋಧ್ಯೆ ಶೀಘ್ರದಲ್ಲೇ ಉದ್ಘಾಟನೆ ಆಗಲಿರುವ ಶ್ರೀ ರಾಮ ದೇಗುಲದಲ್ಲಿ ಶ್ರೀರಾಮನ ಪೌರೋಹಿತ್ಯ ಸೇವೆ ಮಾಡಲು ಆಯ್ಕೆಯಾದ ಯುವ ಪುರೋಹಿತ, ಸಕಲ ವೇದ ಪಾರಂಗತ ಭಾಗ್ಯವಂತ ಮೋಹಿತ್ ಪಾಂಡೆ
ದೇಶದಾದ್ಯಂತ ಕರೆಯಲಾದ 3000 ಕ್ಕಿಂತಲೂ ಅಧಿಕ ಪುರೋಹಿತರ ಸಂದರ್ಶನದಲ್ಲಿ ಮತ್ತು ವೇಧಜ್ಞಾನ ಕಠಿಣ ಪರೀಕ್ಷೆಯಲ್ಲಿ ತನ್ನ ವೇದ ಮತ್ತು ಪೂಜಾ ವಿಧಿ, ವಿಧಾನಗಳ ಅಪಾರ ಪಾಂಡಿತ್ಯ ಮತ್ತು ಜ್ಞಾನದಿಂದ ಆಯ್ಕೆಯಾದ ಕೊನೆಯ 50 ಮಂದಿಯಲ್ಲಿ ಅಗ್ರಸ್ಥಾನಿಯಾಗಿ ಆಯ್ಕೆಯಾದವರು ಮೋಹಿತ್ ಪಾಂಡೆ.
ಯುವ ಪುರೋಹಿತರಾಗಿದ್ದು, ಪ್ರಸ್ತುತ ಗಾಜಿಯಾಬಾದ್ ನ ಧುದೇಶ್ವರನಾಥ ಮಠ ಮತ್ತು ವೆಂಕಟೇಶ್ವರ ವೇದಿಕ್ ಯುನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದಾರೆ. ಇಲ್ಲಿ ವೇದ ಮತ್ತು ಜ್ಞಾನಕ್ಕೆ ಮಹತ್ವ ನೀಡಿ ಆಯ್ಕೆ ಮಾಡಲಾಗಿದೆಯೇ ಹೊರತು ಯಾವುದೇ ಜಾತಿ ಅಥವಾ ಮೀಸಲಾತಿಗೆ ಮನ್ನಣೆ ನೀಡಲಾಗಿಲ್ಲ ಎಂಬುದು ವಿಶೇಷವಾಗಿದೆ.