ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಸಂಯೋಜನೆಯಲ್ಲಿ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರ ಸಹಕಾರದೊಂದಿಗೆ ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಿ.10 ಭಾನುವಾರ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಆವರಣದಲ್ಲಿ ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ಕೇಶವ ತಂತ್ರಿ ಹಾಗೂ ಕೆಮ್ಮಿಂಜೆ ಸುಬ್ರಹ್ಮಣ್ಯ ತಂತ್ರಿಗಳ ಸ್ಮರಣಾರ್ಥವಾಗಿ ಬೆಳಿಗ್ಗೆ 9.30 ರಿಂದ 12.30 ರ ತನಕ ಶಿಬಿರ ನಡೆಯಲಿದೆ.
ಶ್ರೀ ನಂದಿಕೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷ, ತಂತ್ರಿ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ ಶಿಬಿರ ಉದ್ಘಾಟಿಸಲಿದ್ದು, ಶ್ರೀ ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ಶ್ರೀಪಾಲ್ ಜೈನ್ ಅಧ್ಯಕ್ಷತೆ ವಹಿಸುವರು. ಆತ್ರೇಯ ಮಲ್ಪಿಸ್ಪೆಷಾಲಿಟಿ ಕ್ಲಿನಿಕ್‍ನ ಮಧುಮೇಹ ತಜ್ಞೆ ಡಾ.ಅನನ್ಯ ಲಕ್ಷ್ಮೀ ಸಂದೀಪ್, ಚೀಫ್ ಫಿಶಿಷಿಯನ್ ಡಾ.ಸುಜಯ್ ಕೃಷ್ಣ ತಂತ್ರಿ ಉಪಸ್ಥಿತರಿರುವರು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ ತಪಾಸಣೆ, ಇಸಿಜಿ, ನೆಬುಲೈಸೆರ್, ಆಯ್ದ ಔಷಧಗಳು ಲಭ್ಯವಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.