ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ರಚನಾ ಎನರ್ಕೇರ್ ನಡುವೆ ಒಪ್ಪಂದ

ಪುತ್ತೂರು: ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಮೈಸೂರಿನ ಇಂಧನ ನಿರ್ವಹಣಾ ಸಂಸ್ಥೆ ರಚನಾ ಎನರ್ ಕೇರ್ ನಡುವೆ ತಿಳುವಳಿಕೆ ಒಪ್ಪಂದ ನಡೆಯಿತು.

ಮೆಕ್ಯಾನಿಕಲ್ ಸಿವಿಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ಮತ್ತು ತರಬೇತಿಗಳನ್ನು ನಡೆಸುವುದು, ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಪ್ರಾಜೆಕ್ಟ್ಗಳನ್ನು ಗುರುತಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸುವುದು, ಯೋಜನೆಗಳ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿ ಅದಕ್ಕೆ ತಾಂತ್ರಿಕ ಹಾಗೂ ವಾಣಿಜ್ಯಿಕ ಮಾರ್ಗದರ್ಶನವನ್ನು ನೀಡುವುದು, ವೃತ್ತಿಪರ ಸಂಸ್ಥೆಗಳೊಂದಿಗೆ ಕೊಂಡಿಯಾಗಿ ವಿದ್ಯಾರ್ಥಿಗಳ ಇಂಟರ್ನ್ಶಿಪ್ಗೆ ಸಹಕರಿಸುವುದು. ಇವೇ ಮುಂತಾದ ವಿಷಯಗಳಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕೈಗಾರಿಕೆಯಲ್ಲಿ ಇಂಧನ ಉಳಿತಾಯ, ವಿದ್ಯುತ್ ಗುಣಮಟ್ಟ, ಸುರಕ್ಷತೆ ವಿಷಯದಲ್ಲಿ ಅಧ್ಯಯನ ಮತ್ತು ತಿಳುವಳಿಕೆ ಹೊಂದಲು ಇದರಿಂದ ಸಹಾಯವಾಗಲಿದೆ. ಇದಕ್ಕೆ ಅಗತ್ಯವಾದ ಉತ್ತಮ ಅಂತಾರಾಷ್ಟ್ರೀಯ ಗುಣಮಟ್ಟದ ಮಾಪನ ಹಾಗೂ ಉಪಕರಣಗಳನ್ನು ಬಳಸಲಾಗುತ್ತದೆ. ರಚನಾ ಎನೆರ್ ಕೇರ್ ಸಂಸ್ಥೆಯು ಕೇಂದ್ರ ಸರ್ಕಾರದ ಬ್ಯೂರೋ ಆಫ್ ಎನರ್ಜಿ ಎಫೀಶಿಯನ್ಸಿ ಪ್ರಮಾಣ ಪತ್ರ ಪಡೆದ ಎನರ್ಜಿ ಇಂಜಿನಿಯರ್ಗಳು ಮತ್ತು ಮೇನೇಜರ್ಗಳನ್ನು ಹೊಂದಿದೆ.
ಇದೇ ಸಂದರ್ಭದಲ್ಲಿ ರಚನಾ ಎನರ್ಕೇರ್ ನಿರ್ದೇಶಕ ಅನಿಲ್ ಕುಮಾರ್ ನಾಡಿಗೇರ್ ಸುಧಾರಿತ ತಂತ್ರಜ್ಞಾನದ ಮೂಲಕ ಇಂಧನ ಶಕ್ತಿಯ ನಿರ್ವಹಣೆಯಲ್ಲಿ ವೃತ್ತಿ ಅವಕಾಶಗಳು ಮತ್ತು ಕೌಶಲ್ಯದ ಅಗತ್ಯತೆಗಳು ಎನ್ನುವ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ. ಹಾಗೂ ರಚನಾ ಎನರ್ಕೇರ್ ನಿರ್ದೇಶಕ ಅನಿಲ್ ಕುಮಾರ್ ನಾಡಿಗೇರ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಕಾಲೇಜಿನ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಮನುಜೇಶ್ ಬಿ.ಜೆ, ರಚನಾ ಎನರ್ಕೇರ್ನ ಅಸೋಸಿಯೇಟ್ ವೆಂಕೋಬ್ ರಾವ್ ಮತ್ತು ದಕ್ಷಿಣ ಕನ್ನಡ ವಿಭಾಗದ ಅಸೋಸಿಯೇಟ್ ಗಂಗಾಧರ್ ನಾಯರ್ ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top