ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಬಹುಬೇಡಿಕೆಯ ಒಟ್ಟು 50 ರಸ್ತೆಗಳಿಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದ್ದು ಎಲ್ಲಾ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕಬಕ ಗ್ರಾಮದ ಕಲ್ಲೆಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ರಸ್ತೆಗಳು ಕಾಂಕ್ರಿಟೀಕರಣವಾಗದೆ ಬಾಕಿ ಇದೆ. ಅನೇಕ ಕಡೆಗಳಲ್ಲಿ ಕಾಂಕ್ರಟೀಕರಣವೇ ನಡೆದಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಅಭಿವೃದ್ದಿಯ ಬಗ್ಗೆ ಭರವಸೆಯನ್ನು ನೀಡಿದ್ದೆ. ಆ ರಸ್ತೆಗಳನ್ನು ಹಂತಹಂತವಾಗಿ ಕಾಂಕ್ರೀಟ್ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಬಕ ಕಾಂಗ್ರೆಸ್ ವಲಯಾಧ್ಯಕ್ಷರಾದ ದಾಮೋದರ್ ಮುರ, ಬಾಲಕೃಷ್ಣ ಪೂಜಾರಿ, ಕಬಕ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಕಬಕ, ಜಿನ್ನಪ್ಪ ಪೂಜಾರಿ ಮುರ, ನಾರಾಯಣ ಗೌಡ, ಬೂತ್ ಅಧ್ಯಕ್ಷರಾದ ಸುಂದರ ಸಫಲ್ಯ, ಸತೀಶ್ ಜೆ ಪಿ, ಚಂಧ್ರಹಾಸ ಗೌಡ, ಪ್ರಸಾದ್ ಗೌಡ, ದಿನೇಶ್ ಸಫಲ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ಜಾನಕಿ ಬಲಕೃಷ್ಣ ಗೌಡ, ರಶೀದ್ ಮುರ, ಭಾರತಿ ವಿಠಲ್ ಪೂಜಾರಿ, ದೇವಕಿ ಗೌಡ, ದಿನೇಶ್ ಗೌಡ ಶೇವಿರೆ, ಯಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.